ಚಿತ್ರದುರ್ಗ ; ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ ಮತ್ತೆ 10 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾದಂತಾಗಿದೆ.

ಮಂಗಳವಾರದ ವರದಿಯಲ್ಲಿ ಚಿತ್ರದುರ್ಗದ 52 ವರ್ಷದ ಪುರು, 40 ವರ್ಷದ ಪುರುಷ, ಚಿತ್ರದುರ್ಗ ತಾಲ್ಲೂಕಿನ 25 ವರ್ಷದ ಪುರುಷ, 36 ವರ್ಷದ ಪುರುಷ, ಹಿರಿಯೂರಿನ 25 ವರ್ಷದ ಮಹಿಳೆ, 34 ವರ್ಷದ ಮಹಿಳೆ, ಹಿರಿಯೂರು ತಾಲ್ಲೂಕಿನ 21 ವರ್ಷದ ಪುರುಷ, ಹೊಸದುರ್ಗದ 50 ವರ್ಷದ ಪುರುಷ, ಹೊಸದುರ್ಗ ತಾಲ್ಲೂಕಿನ 29 ವರ್ಷದ ಪುರುಷ ಹಾಗೂ ಮೊಳಕಾಲ್ಮೂರಿನ 28 ವರ್ಷದ ಪುರಷ ಸೇರಿದಂತೆ ಒಟ್ಟು 10 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಮಂಗಳವಾರ ಒಟ್ಟು 95 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 10 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.   ಜಿಲ್ಲೆಯ ಒಟ್ಟು 130 ದೃಢಪಟ್ಟ ಪ್ರಕರಣಗಳಲ್ಲಿ ಈಗಾಗಲೆ 83 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 45 ಸಕ್ರಿಯ ಪ್ರಕರಣಗಳು ಇವೆ.

45 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 14, ಭರಮಸಾಗರ-02, ಹಿರಿಯೂರು ತಾಲ್ಲೂಕು ಧರ್ಮಪುರದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ 05, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ 02, ಪರಶುರಾಂಪುರ-02, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 02, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ ಮೂವರು ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಪಾಸಿಟೀವ್ ಕಂಡುಬಂದು, ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 05. ಈವರೆಗೆ ಜಿಲ್ಲೆಯಲ್ಲಿ ಇಬ್ಬರು ಕೋವಿಡ್‍ನಿಂದ ಮೃತಪಟ್ಟಿರುತ್ತಾರೆ. ಮಂಗಳವಾರದ ವರದಿಯಲ್ಲಿ ಚಳ್ಳಕೆರೆಯ 61 ವರ್ಷದ ಪುರುಷ (ಪಿ-18177) ಕೋವಿಡ್‍ನಿಂದಾಗಿ ಸಾವಿಗೀಡಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಒಟ್ಟು 32 ಕಂಟೈನ್ಮೆಂಟ್ ವಲಯಗಳಿವೆ.  ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 2051 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.  ಈವರೆಗೆ ಸಾರಿ ಮತ್ತು ಐಎಲ್‍ಐ, ಯುಆರ್‍ಐನ ಒಟ್ಟು 3033 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ 505 ಜನ ಹೋಂ ಕ್ವಾರಂಟೈನ್‍ನಲ್ಲಿ ಹಾಗೂ ಇಬ್ಬರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇದ್ದಾರೆ.  ಈವರೆಗೆ 9377 ಜನರ ಮಾದರಿ ಸಂಗ್ರಹಿಸಲಾಗಿದ್ದು, 6147 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 192 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.