ಚಿತ್ರದುರ್ಗ: ಜಿಲ್ಲಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲಿಯೇ ಮುಖ್ಯ ಮಂತ್ರಿಗಳಿಂದ ಎರಡು ಬಾರಿ ಶ್ಲಾಘನೀಯ ಪತ್ರಬಂದಿದೆ. ಎರಡು ತಿಂಗಳ ಕೆಳಗೆ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಅವರಿಗೆ ಮುಖ್ಯ ಮಂತ್ರಿಗಳಿಂದ ಪತ್ರವೊಂದು ಬಂದಿತ್ತು.
ಅವರು ಜಿಲ್ಲೆಯಲ್ಲಿ ಬೆಳೆ ವಿಮೆಯ ತಂತ್ರಾಂಶವನ್ನು ಸರಿಯಾಗಿ ಅನುಷ್ಠಾನ ಮಾಡಿದ್ದರಿಂದ ಮೆಚ್ಚಿ ಮುಖ್ಯ ಮಂತ್ರಿಗಳ ಕಾರ್ಯಾಲಯದಿಂದ ಪತ್ರ ಬಂದಿತ್ತು.

ಈ ಬಾರಿ ಮುಖ್ಯ ಮಂತ್ರಿಗಳ ಕಚೇರಿಯಿಂದ ಪತ್ರ ಬಂದಿರುವುದು ಸರ್ಕಾರದ ಮಕಾತ್ವಾಂಕ್ಷಿ ಯೋಜನೆಗಳಲ್ಲಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ ಹಾಡಿ, ದೊಡ್ಡಿ ಪಾಳ್ಯ ಕ್ಯಾಂಪ್, ಕಾಲೋನಿ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಕಾನೂನು ಬದ್ದವಾಗಿ ಹಕ್ಕು ದಾಖಲೆಗಳನ್ನು ನೀಡುವ ಯೋಜನೆಯಲ್ಲಿ ತಾವು ಗಣನೀಯ ಪ್ರಗತಿಯನ್ನು ಸಾಧಿಸುವುದರಿಂದ, ಜಿಲ್ಲೆಯಲ್ಲಿ ಗುರುತುಸಲಾದ ೩೪೬ ದಾಖಲೆರಹಿತ ಜನವಸತಿಗಳ ಪೈಕಿ ಜನವರಿ ೨೦೧೭ ರಿಂದ ಇದುವರೆಗೆ ೯೨ ದಾಖಲೆರಹಿತ ಜನವಸತಿಗಳಿಗೆ ಪ್ರಾಥಮಿಕ ಅಧಿಸೂಚನೆ ಮತ್ತು ೭೭ ಜನವಸತಿಗಳಿಗೆ ಅಚಿತಿಮ ಅಧಿಸೂಚನೆ ಹೊರಡಿಸಿ ನಿಯಮಿತ ಅವಧಿಯಲ್ಲಿ ದಾಖಲೆಯ ಪ್ರಗತಿ ಸಾಧಿಸಿರುವುದಕ್ಕೆ ಸಂತೋಷ ತಂದಿದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಅವರನ್ನು ಮುಖ್ಯ ಮಂತ್ರಿಗಳಿಂದ ಶ್ಲಾಘಿಸಿರುವ ಪತ್ರ ಬಂದಿದೆ.