ಬೆಂಗಳೂರು: ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೊ ಕಳೆದ ಎರಡು ಮೂರು ದಿನಗಳ ಕೆಳಗೆ ಪ್ರಮುಖ ಸುದ್ದಿಯೊಂದು ನೀಡಿತ್ತು. ಇದರ ಜೊತೆಗೆ ಗ್ರಾಹಕರಿಗೆ ಶಾಕ್ ಕೂಡ ನೀಡಿತ್ತು.

ಅದು ಏನಪ್ಪ ಅಂದ್ರೆ ಇನ್ಮುಂದೆ ಜಿಯೊದಿಂದ ಇತರೆ ನೆಟ್ ವರ್ಕ್ ಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷ 6 ಪೈಸೆ ಶುಲ್ಕ ಪಾವತಿಸ ಬೇಕಾಗುತ್ತದೆ ಹಾಗೂ ಈ ಹೊಸ ನಿಯಮವು ಇಂದಿನಿಂದಲೇ ಜಾರಿಯಾಗಲಿದೆ.! ಟ್ರಾಯ್ ನ ಅಂತರ್ಸಂಪರ್ಕ ಬಳಕೆಯ ಶುಲ್ಕದ ಕಾರಣದಿಂದಾಗಿ ಈ ಹೊಸ ನಿಯಮ ಜಾರಿಯಾಗಲಿದ್ದು, ಡೇಟಾ ಹಾಗೂ ಒಳಬರುವ ಕರೆಗಳು ಈ ಹಿಂದೆಯಂತೆಯೇ ಉಚಿತವಾಗಿರಲಿವೆ ಎಂದು ಕಂಪನಿ ಹೇಳಿತ್ತು.

ಆಗ ಜಿಯೊ ಗ್ರಾಹಕರು ಕಕ್ಕಾಬಿಕ್ಕಿ ಆದರೂ. ಒಂದು ದಿನ ಜಿಯೊ ದಿಂದ ಅನ್ಯ ನೆಟ್ ವರ್ಕ್ ಗೆ ಯಾವುದೇ ಕರೆಗಳು ಹೋಗಲಿಲ್ಲ. ಆದ್ರೆ ಇಂದು ಹೊಸ ಸುದ್ದಿಯೊಂದು ಹೊರ ಬಂದಿದ್ದು, ನೀವು ಅಕ್ಟೋಬರ್ 9 ರಂದು ಅಥವಾ ಅದಕ್ಕೂ ಮೊದಲು ರೀಚಾರ್ಜ್ ಮಾಡಿದ್ದರೆ, ನಿಮ್ಮ ಯೋಜನೆ ಅವಧಿ ಮುಗಿಯುವವರೆಗೆ ನೀವು ಉಚಿತ ಕರೆ ಪ್ರಯೋಜನಗಳನ್ನು (ಜಿಯೊ ಅಲ್ಲದ ಸಂಖ್ಯೆಗಳಿಗೆ ಸಹ) ಕರೆ ಮಾಡಬಹುದು ಆನಂತರ ಬೇರೆ ನೆಟ್ ವರ್ಕ್ ಗಳಿಗೆ ಶುಲ್ಕ ಪಾವತಿಸ ಬೇಕಾಗುತ್ತದೆ.