ಪುಣೆ: ಜಿಎಸ್​ಟಿಯಲ್ಲಿ ದೋಷ ಇರಬಹುದು, ಆದರೆ ಇದು ದೇಶದ ಕಾನೂನು ಎಂದು ಸೀತಾರಾಮನ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ಶುಲ್ಕ(GST) ನೀತಿ ಜಾರಿಗೆ ತಂದು 2 ವರ್ಷವಾಗಿತು. ಇದರ ಚೌಕಟ್ಟಿನಲ್ಲಿ ಇಂದಿಗೂ ಕೆಲ ದೋಷಗಳಿರಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಒಪ್ಪಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಜಿ ಎಸ್​ಟಿ ಖಂಡಿಸಲು ಆಗಲ್ಲ. ಈ ನೀತಿ ಪ್ರತಿ ರಾಜ್ಯ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ದೇಶದ ಕಾನೂನಾಗಿದೆ. ಜಿಎಸ್​ಟಿಯ ತೊಂದರೆ ನೀಡುತ್ತಿದ್ದರೆ ಮತ್ತು ಉತ್ತಮ ಚೌಕಟ್ಟು ರೂಪಿಸಲು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.