ನವದೆಹಲಿ : ಜಿಎಸ್ ಟಿ ತೆರಿಗೆದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ಸ್ ಮತ್ತು ತೆರಿಗೆ ಪಾವತಿ ಅರ್ಜಿ `GSTR-3B’ ವಿಳಂಬ ಸಲ್ಲಿಕೆ ಶುಲ್ಕವನ್ನು ಗರಿಷ್ಠ 500 ರೂ.ಗೆ ಮಿತಿಗೊಳಿಸಿದೆ.

2017 ರ ಜುಲೈನಿಂದ 2020 ರ ಜುಲೈ ವರೆಗಿನ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ತೆರಿಗೆದಾರರಿಗೆ ಈ ನಿಯಮ ಅನ್ವಯವಾಗಲಿದ್ದು, ತೆರಿಗೆ ಬಾಕಿ ಉಳಿಸಿಕೊಂಡಿರದಿದ್ದರೆ ವಿಳಂಬ ಶುಲ್ಕ ಇರುವುದಿಲ್ಲ ಎಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಪ್ರಕಟಣೆ ತಿಳಿಸಿದೆ.!