ನವದೆಹಲಿ : 2019-20ನೇ ಸಾಲಿನ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಗೆ ನೀಡಲಾಗಿದ್ದಂತ ಆಗಸ್ಟ್ 31ರ ಗುಡುವನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಜಿಎಸ್ಟಿ ಪಾವತಿದಾರರಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ತೆರಿಗೆ ಮತ್ತು ಕಸ್ಟಮ್ಸ್ ನ ಕೇಂದ್ರೀಯ ಮಂಡಳಿ(ಸಿಬಿಐಸಿ) ಅಧಿಸೂಚನೆ ಹೊರಡಿಸಿದ್ದು, ರಾಜಿ ತೆರಿಗೆ(ಕಂಪೋಸಿಷನ್) ಆಯ್ಕೆ ಮಾಡಿಕೊಂಡವರಿಗೆ 2019-20ನೇ ಸಾಲಿನ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಗುಡುವನ್ನು ಆಗಸ್ಟ್ 31ರ ಬದಲಿಗೆ, ಅಕ್ಟೋಬರ್ 31ಕ್ಕೆ ವಿಸ್ತರಿಸಲಾಗಿದೆ.