ಬಳ್ಳಾರಿ: ಜಿಂದಾಲ್‌ನಿಂದಾಗಿಯೇ ಬಳ್ಳಾರಿಯಲ್ಲಿ‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಂದಾಲ್ ಶೀಘ್ರ ಕನಿಷ್ಠ 2 ಸಾವಿರ ಹಾಸಿಗೆ ಸೌಕರ್ಯ‌ ಕಲ್ಪಿಸದಿದ್ದರೆ ಪಾದಯಾತ್ರೆ ನಡೆಸಲಾಗುವುದು ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಜಿಂದಾಲ್‌ನಲ್ಲಿ ದಿನ ಎಷ್ಟು ಮಂದಿಗೆ ಸೋಂಕು ದೃಢಪಡುತ್ತಿದೆ. ಚಿಕಿತ್ಸೆಗೆ ಏನೇನು ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಸರಿಯಾದ ಮಾಹಿತಿಗಳಿಲ್ಲ. ಜಿಂದಾಲ್ ತನ್ನ ಜವಾಬ್ದಾರಿ ಅರಿತು ಸ್ಪಂದಿಸಬೇಕು ಎಂದು ಎಚ್ಚರಿಸಿದ್ದಾರೆ.!