ಚಿತ್ರದುರ್ಗ: ದಸರ ಉತ್ಸವವನ್ನು ಇಡೀ ನಾಡೆನೆಲ್ಲೆಡೆ ಆಚರಿಸುತ್ತಾರೆ. ಚಿತ್ರರಂಗದವರಿಗೆ ಇಂತಹ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.. ಜಾತಿ ಮತ ಯಾವುದನ್ನು ನೋಡದೆ ನಾವೆಲ್ಲರು ಒಂದೇ ಎಂದು ಸಾರುವ ಮಠ ಶ್ರೀಮಠ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದರು.

ಅನುಭವಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಚಿತ್ರರಂಗದಲ್ಲಿ ನಾವೆಲ್ಲರೂ ಒಂದೊಂದು ಪಾತ್ರ ಮಾಡುತ್ತ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡುತ್ತೇವೆ. ಹಲವು ವಿಧವಾದ ಅನುಭವಗಳಾಗಿವೆ. ಇಂದು ಮುರುಘಾಶರಣರ ಪಾದದಲ್ಲಿರುವುದು ನನ್ನ ಅದೃಷ್ಟವಾಗಿದೆ. ಈ ಸಂಧರ್ಭವನ್ನು ನನ್ನ ಜೀವನದಲ್ಲಿ ಎಂದು ಮರೆಯುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮರುಘಾಶರಣರು, ಹಿರಿಯ ಚಿತ್ರನಟ ದೊಡ್ಡಣ್ಣ, ನಟ ದರ್ಶನ್, ಸಾಹಿತಿ ಬಿ.ಎಲ್.ವೇಣು ಮಾತನಾಡಿ, ಸೇರಿದಂತೆ ಮಧುರೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್‍ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಶ್ರೀನಿವಾಸ್ ಮೂರ್ತಿ, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್‍ಯನಿರ್ವಾಹಕ ನಿರ್ದೇಶಕರುಗಳಾದ ಡಾ.ಈ.ಚಿತ್ರಶೇಖರ್, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್‍ಯನಿರ್ವಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.