ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಜಾಜೂರು ಗ್ರಾಮದ ಟಿ.ಹೆಚ್.ಸರಿತಾರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರಶಸ್ತಿ ನೀಡಿದೆ.

ಸರಿತಾ ಅವರು ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಕಾಲದ ಅಮರನಾಯಕರು ಚಾರಿತ್ರಿಕ ವಿಶ್ಲೇಷಣೆಯೆಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ.

ಇವರು ಜಾಜೂರು ಗ್ರಾಮದ ದಿ|| ಹನುಮಂತಪ್ಪ, ಸಾವಿತ್ರಮ್ಮ ಪುತ್ರಿಯಾಗಿದ್ದಾರೆ.
ಡಾಕ್ಟರೇಟ್ ಪ್ರಶಸ್ತಿ ಪಡೆದ ಟಿ.ಹೆಚ್.ಸರಿತಾರವರಿಗೆ ಜಾಜೂರು ಗ್ರಾಮದ ಗ್ರಾಮಸ್ಥರು ಹಾಗೂ ಕುಟುಂಬ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.