ಬೆಂಗಳೂರು : ಜಮಖಂಡಿಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದಾರೆ.

ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಬಾಗಲಕೋಟೆಯಲ್ಲಿ ನಡೆದ ರಸ್ತೆ ಈ ಘಟನೆ ನಡೆದಿದೆ. ಬ್ಯಾರೇಜ್ ಸಿದ್ದು ಎಂದೇ ಕರೆಯಲ್ಪಡುವ ಜಮಖಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಶ್ರೀ ಸಿದ್ದು ನ್ಯಾಮನಗೌಡ ಅವರ ನಿಧನದ ಸುದ್ದಿ ಜನರಿಗೆ ಆಶ್ಚರ್ಯ ವಾಗಿದೆ.

ಪಾರ್ಥಿವ ಶರೀರವನ್ನು ಜಮಖಂಡಿಯ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.