ನವದೆಹಲಿ: ಮೊದಲ ಕಂತಿನ 500 ರೂಪಾಯಿಯನ್ನು ನಾಳೆಯಿಂದ ಮಹಿಳಾ ಜನ ಧನ್ ಯೋಜನೆ ಫಲಾನುಭವಿಗಳ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ.

ಈ ಹಣವನ್ನು ಏಪ್ರಿಲ್ 9ರ ಬಳಿಕ ಫಲಾನುಭವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ದಿನ ಹಿಂತೆಗೆದುಕೊಳ್ಳಬಹುದಾಗಿದೆ.

ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಬಳಿಕ, ಬಡ ಜನರು ತೊಂದರೆಗೆ ಒಳಗಾಗಬಾರದು ಎಂದು ಕೇಂದ್ರ ಸರ್ಕಾರ ಮೂರು ತಿಂಗಳವರೆಗೆ ಮಹಿಳಾ ಜನ ಧನ್ ಯೋಜನೆ ಫಲಾನುಭವಿಗಳ ಖಾತೆಗಳಲ್ಲಿ ತಿಂಗಳಿಗೆ 500 ರೂಪಾಯಿ ಜಮಾ ಮಾಡಲು ತೀರ್ಮಾನಿಸಿತ್ತು.