ಬೆಂಗಳೂರು: ಐದು ಉಪಚುನಾವಣೆಗಳು ಮುಗಿಯಿತು. ಎನ್ನುವಷ್ಟರಲ್ಲಿ ಗಾಲಿ ಜನಾರ್ದನರೆಡ್ಡಿಗೆ ಕಂಡಕ ಶುರುವಾಗಿದೆ. ರೆಡ್ಡಿಯವರನ್ನು ಹುಡುಕಲು ಅಧಿಕಾರಿಗಳು ಮುಂದಾಗಿದ್ದಾರೆ.

ಸರ್ಚ್ ವಾರೆಂಟ್ ಪಡೆದ ಸಿಸಿಬಿ ಅಧಿಕಾರಿಗಳು, ಜನಾರ್ಧನ ರೆಡ್ಡಿಯ ಪಾರಿಜಾತ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರಂತೆ

ಇನ್ನು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಾಗಿರುವುದರಿಂದ ಜನಾರ್ಧನ ರೆಡ್ಡಿಯ ನಿವಾಸದ ಬಾಗಿಲುಗಳು ಲಾಕ್​ ಆಗಿದ್ದವು ಇದೇ ವೇಳೆ ನುರಿತ ಕೀ ಮಾಸ್ಟರ‍್ ಗಳನ್ನು ಕರೆತಂದು ಮನೆಯ ಕೀ ಅನ್ನು ಒಪನ್ ಮಾಡಿದರು ಕೂಡ ಬಾಗಿಲು ಓಪನ್ ಮಾಡುವಲ್ಲಿ ನಕಲಿ ಕೀ ಮೇಕರ್ ವಿಫಲವಾದರು. ಕೊನೆಗೆ ನಕಲಿ ಕೀ ಮೇಕರ್ ಕೀ ಓಪನ್​ ಮಾಡಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಆದ್ರೆ ರೆಡ್ಡಿ ಎಲ್ಲಿದ್ದಾರೆಂದು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.