ಬಳ್ಳಾರಿ : ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ಬಳ್ಳಾರಿ ಗಣಿಧಣಿ ಜನಾರ್ಧನರೆಡ್ಡಿ ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿಯಲ್ಲಿ ಬೀಡು ಬಿಟ್ಟಿರುವ  ಮನೆಯ ಮುಂದೆಯೇ ಚುನಾವಣೆ ಆಯೋಗ ಚೆಕ್ ಪೋಸ್ಟ್ ಹಾಕಿದೆ.

ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವುದರಿಂದ, ಗೆಳಯನನ್ನು ಗೆಲ್ಲಿಸಲು ತಂತ್ರ ರೂಪಿಸುವ ನಿಪುಣರಾದ ರೆಡ್ಡಿಗೆ ಚುನಾವಣಾ ಆಯೋಗ ಚಕ್ ಪೋಸ್ಟ್ ನಿಂದ ತೊಂದರೆ ಆಗುವ ಸಾಧ್ಯತೆ ಇದೆ. ಏಕೆಂದರೆ ರೆಡ್ಡಿಯವರನ್ನು ಭೇಟಿ ಮಾಡಲು ಬರುವವರ ಮೇಲೆ ಆಯೋಗ ಹದ್ದಿನ ಕಣ್ಣು ಇಟ್ಟಿದ್ದು ಎಲ್ಲಾವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ.

ಹಾಗಾಗಿ ಚುನಾವಣೆಯಲ್ಲಿ ಯಾವುದೇ ಆಕ್ರಮ ನಡೆಯಬಾರದು ಅದಕ್ಕಾಗಿ ಈ ಚಕ್ ಪೋಸ್ಟ್ ಹಾಕಲಾಗಿದೆ. ಆದ್ರೆ ರೆಡ್ಡಿಯವರಿಗೆ ಚಾಪೆಕೆಳೆಗೆ ನುಸುಳೋದು ಗೊತ್ತು. ರಂಗೋಲಿ ಕೆಳೆಗೆ ನುಸುಳೋದು ಗೊತ್ತು ಅಂತ ಅವರ ಅಭಿಮಾನಿಗಳು ಹೇಳುತ್ತಾರೆ.!