ಜನಾರ್ಧನರೆಡ್ಡಿ ಗೆ ಶುರುವಾಯಿತು ಕಂಟಕ ಏನು ಗೊತ್ತಾ.?

ಹೊಸಪೇಟೆ: ಜನಾರ್ಧನರೆಡ್ಡಿ ವಿರುದ್ಧ ಕೇಸ್ ದಾಖಲಿಸಲು ಸುಪ್ರೀಂ ಆದೇಶ ನೀಡಿದೆ ಎಂದು ಎಸ್.ಆರ್ ಹಿರೇಮಠ ಹೇಳಿದ್ದಾರೆ.
ಬಳ್ಳಾರಿಯ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಮಾಲೀಕ ಗಾಲಿ ಜನಾರ್ದನ ರೆಡ್ಡಿ ದಂಪತಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸುಪ್ರೀಂ‌ಕೋರ್ಟ್ ನೀಡಿದ್ದು,  ಅದೇಶವನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸ್ವಾಗತಿಸಿದ್ದಾರೆ. ಮೊದಲು ಜನಾರ್ದನ ರೆಡ್ಡಿ ದಂಪತಿಗಳನ್ನು  ನ್ಯಾಯಾಲಯ ಖುಲಾಸೆ ಮಾಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ರೆಡ್ಡಿ ದಂಪತಿಗಳಿಗೆ ಸಿಬಿಐ ನೋಟಿಸ್ ಜಾರಿಮಾಡಿದೆ ಎಂದು ಹೇಳಿದರು.