ಚಿತ್ರದುರ್ಗ: ಜನಾರ್ಧನರೆಡ್ಡಿಗೆ ಲೂಟಿ, ಕಳ್ಳತನ ಮಾಡಲು ನಾವು ಹೇಳಿದ್ದೆವಾ? ಅಂತ ಸಿದ್ದರಾಮಯ್ಯ ಹೇಳಿದ್ರು.

ಕಬೀರಾನಂದಸ್ವಾಮಿ ಸಮುದಾಯ ಭವನ ಉದ್ಘಾಟನೆ ಗೆ ಬಂದಿದ್ದಾಗ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ಜನಾರ್ಧನರೆಡ್ಡಿ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಮಾತಿಗೆ ಸಿದ್ಧರಾಮಯ್ಯ ತಿರುಗೇಟು ನೀಡಿದ್ರು,

ಮನುಷ್ಯರನ್ನು ದ್ವೇಷಿಸುವವರು ಮತಾಂಧರು, ಬಿಜೆಪಿಯವರು ಮನುಷ್ಯರನ್ನು ದ್ವೇಷಿಸುತ್ತಾರೆ ಮುಸ್ಲಿಂರು, ಕ್ರೈಸ್ತರನ್ನು ದ್ವೇಷಿಸುತ್ತಾರೆ ಚರಿತ್ರೆಯನ್ನೇ ಓದಿಕೊಳ್ಳದೆ ಮಾತನಾಡದವರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಹೇಳಿದರ ಅವರು, ಅವನ್ಯಾವನೋ ಅನಂತಕುಮಾರ್ ಹೆಗಡೆ ಹೇಳ್ತಾನೆ. ಸಂವಿಧಾನ ಬದಲಾವಣೆ ಮಾಡೋಕೆ ಅಧಿಕಾರಕ್ಕೆ ಬಂದಿರೋದಂತೆ. ಸಮಾಜ ಛಿದ್ರ ಮಾಡುವುದು ಬಿಜೆಪಿಯವರು, ನಾವಲ್ಲ ಎಂದರು.