ಬೆಂಗಳೂರು: ಜ.1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.

ಬದಲಾದ ನಿಯಮ ಏನೆಂದರೆ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೋ ಸೇರಿಸುವುದು ಕಡ್ಡಾಯ.

ವ್ಯಕ್ತಿಯ ಲ್ಯಾಂಡ್‌ಲೈನ್‌ನಲ್ಲಿ ಸೊನ್ನೆ ಒತ್ತದೇ ನೇರವಾಗಿ ಮೊಬೈಲ್ ನಂ‌ಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್ ರೆಕಾರ್ಡ್ ಪ್ಲೇ ಮಾಡುವಂತೆ ನಿರ್ದೇಶನ ನೀಡಲಾಗಿದೆ.