ಬೆಂಗಳೂರು: ಜನರಿಗೆ ಕೊರೋನಾ ಸೋಂಕಿನ ಬಗ್ಗೆ ಇರುವ ಭಯಕ್ಕಿಂತ, ಸೋಂಕು ತಗುಲಿದಲ್ಲಿ ಸಮಾಜದಲ್ಲಿ ಎದುರಿಸಬೇಕಾದ ಬಹಿಷ್ಕಾರದ ಬಗ್ಗೆ ಹೆಚ್ಚು ಭಯವಿದೆ ಎಂದು ರಾಜ್ಯ ಶ್ವಾಸಕೋಶ ಶಾಸ್ತ್ರಜ್ಞರುಗಳ ಸಂಘದ ಅಧ್ಯಕ್ಷ ಡಾ. ಕೆ.ಎಸ್.ಸತೀಶ್ ಹೇಳಿದ್ದಾರೆ.

ಹಾಗಾಗಿ  ಜನ ಸ್ವಯಂ ಪ್ರೇರಿತವಾಗಿ ಕೊರೋನಾ ಪರೀಕ್ಷೆಗೆ ಮುಂದಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಜನ ಭಯಪಡಬೇಕಿಲ್ಲ. ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ಮನವಿ ಸಹ ಮಾಡಿದ್ದಾರೆ.