ಚಿತ್ರದುರ್ಗ: ಸಿರಿಗೆರೆ ಮಠದಿಂದ ನಡೆಯುವ ತರಬಾಳು ಹುಣ್ಣಿಮೆ ಈ ಬಾರಿ ಜಗಳೂರಿನಲ್ಲಿ ನಡೆಯಲಿದೆ. ಜನವರಿ 23 ರಿಂದ ಪ್ರಾರಂಭವಾಗುವ ತರಳಬಾಳು ಹುಣ್ಣಿಮೆ 31 ರವರಗೆ ನಡೆಯಲಿದೆ.

ತರಳಬಾಳು ಹುಣ್ಣಿಮೆ ಜಗಳೂರಿನಲ್ಲಿ ನಡೆಯುತ್ತಿರುವುದು ಮೂರನೇ ಬಾರಿ. ಸಿರಿಗೆರೆಯಲ್ಲಿ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮೊದಲ ಬಾರಿಗೆ 1950 ರಲ್ಲಿ ಜಗಳೂರಿನಲ್ಲಿ ನಡೆದಿತ್ತು. ಈ ಬಾರಿ ಮತ್ತೆ ಜಗಳೂರಿನಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ 6-30 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮಕ್ಕೆ ನಾಡಿನ ರಾಜಕಾರಣಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ವಿಚಾರ ಸಂಕಿರ್ಣ ನಡೆಯಲಿದೆ.

(ತರಳಬಾಳು ಹುಣ್ಣಿಮೆ ನಡೆದು ಬಂದ ದಾರಿ ಅದರ ಮಹತ್ವದ ವಿಚಾರಗಳನ್ನು ಬಿಸಿ ಸುದ್ದಿ ಸಧ್ಯದಲ್ಲಿಯೇ ಪ್ರಕಟಿಸಲಿದೆ.)
-ಸಂ