ಬೆಳಗಾವಿ: ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ಅಷ್ಟೇ ಅಲ್ಲದೇ ಜೆಡಿಎಸ್‌ನ ಅತೃಪ್ತರೂ ರಾಜೀನಾಮೆ ನೀಡಲಿದ್ದಾರೆ. ಆದರೆ ಎಷ್ಟು ಜನ ರಾಜೀನಾಮೆ ನೀಡಲಿದ್ದಾರೆ ಎಂಬುವುದನ್ನು ಈಗ ನಾನು ಬಹಿರಂಗ ಪಡಿಸುವುದಿಲ್ಲ ಆದ್ರೆ ಲೋಕಸಭಾ ಚುನಾವಣೆ ನಂತರ ದೋಸ್ತಿ ಸರಕಾರದ ಭವಿಷ್ಯ ಬದಲಾಗಲಿದೆ ಎಂದರು.