ರಾಯಚೂರು: ಚುನಾವಣೆಯ ಗಡಿಬಿಡಿ ಬೇರೆ ಮತದಾರರನ್ನು ಓಲೈಸಲು ಏನೆಲ್ಲಾ ತಂತ್ರಮಾಡುತ್ತಾರೆ ರಾಜಕೀಯ ಮಂದಿ ಅಲ್ವ ಇಲ್ಲಿ ನೋಡಿ ಮತದಾರರಿಗೆ ನಕಲಿ ನೋಟ್ ಹಂಚಲು ರೆಡಿ ಆದ ಸುದ್ದಿಯೊಂದು ಬಂದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ಚುನಾವಣೆ ಖರ್ಚಿಗಾಗಿ ಮತದಾರರಿಗೆ ಹಂಚಲು ಖೋಟಾ ನೋಟು ಬಳಕೆ ಮಾಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ವಿವಿಧೆಡೆ ಖೋಟಾ ನೋಟು ಹಂಚಿಕೆ ಮಾಡಲಾಗಿದ್ದು, ಬಾರ್, ಪೆಟ್ರೋಲ್ ಬಂಕ್, ಡಾಬಾಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ಅದು 500ರೂಗಳ ನೋಟ್.

ಹಾಗಾಗಿ 500 ನೋಟ್ ಗಳ ಬಗ್ಗೆ ನೀವು ಒಸಿ ನಿಗ ಇಡ್ರಪ್ಪ.