ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಹತ್ತಿರ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಫಾಲೋ ಮಾಡಲ್ಲ. ಬೇರೆ ನಾಯಕರನ್ನೂ ಫಾಲೋ ಮಾಡುತ್ತಾರೆ. ಮತದಾರರು ಕುಮಾರಸ್ವಾಮಿ ಅವರು ತಿಳಿದುಕೊಂಡಿರುವಷ್ಟು ದಡ್ಡರಲ್ಲ. ಅವರ ಊಹೆಯಂತೆ ನಡೆಯುವಂತಿದ್ದರೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಏಕೆ ಸೋಲುತ್ತಿದ್ದರು ಎಂದು ಹೇಳಿದರು.