ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುವ ನಿರೀಕ್ಷೆಯಿದ್ದು, ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಆದಾಯ ತೆರಿಗೆ ಇಲಾಖೆಯಿಂದ ಹಲವು ತಂಡಗಳನ್ನು ನೇಮಿಸಲಾಗಿದೆ ಎಂದು  ಆದಾಯ ತೆರಿಗೆ(ತನಿಖಾ) ವಿಭಾಗದ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಆದಾಯ ತೆರಿಗೆ ವಿಭಾಗದ ಹೊಸ ಕಚೇರಿಯನ್ನು ಉದ್ಘಾಟಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವೂ ಹಲವು ಸುತ್ತಿನ ಸಭೆಗಳನ್ನು ನಡೆಸಿ ಸೂಚನೆ ನೀಡಿದೆ. ಆದಾಯ ತೆರಿಗೆ ವಿಭಾಗದ ಉಪ ನಿರ್ದೇಶಕರಿಗೆ ಅನುಮಾನ ಬಂದಲ್ಲಿ ತಕ್ಷಣವೇ ಸ್ವಂತ್ತನ್ನು ವಶಪಡಿಸಿಕೊಳ್ಳುವ ಅಥವಾ ಹುಡುಕುವ ಶಾಸನಬದ್ಧ ಅಧಿಕಾರವಿರುತ್ತದೆ. ಅಲ್ಲದೆ, ಎಲ್ಲೇ ಹಣದ ಹಂಚಿಕೆಯಾಗುತ್ತಿದ್ದರೂ, ಅಥವಾ ಸಾಗಾಟವಾಗುತ್ತಿದ್ದರೂ ಆ ಬಗ್ಗೆ ಇಲಾಖೆಗೆ ಜನರು ದೂರು ನೀಡಲು ಅಥವಾ ಮಾಹಿತಿ ನೀಡಲು ಹೆಲ್ಫ್ ಲೈನ್ ರೀತಿಯ ಫೊನ್ ನಂಬರ್ ಮತ್ತು ಇಮೇಲ್ ಐಡಿಯೊಂದನ್ನು ಒದಗಿಸಲಾಗುತ್ತೆ ಎಂದು ಹೇಳಿದ್ದಾರೆ.