ಬಂಗಾಳ:  ರಾಜಕೀಯ ಕೆಸರೆರಚಾಟಗಳು ಕೆಲವೊಮ್ಮೆ ತೀರಾ ಅಸಹ್ಯ ಎನಿಸುವ ಮಟ್ಟ ತಲುಪಿಬಿಡುತ್ತವೆ. ಇಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ಹಾಲ್ಡಿಯಾದಲ್ಲಿ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಘಟಿಸಿದೆ.

ಇಲ್ಲಿನ ಮೆದಿನಿಪುರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್‌ ಆಯೋಜಿಸಿದ್ದ ರ‍್ಯಾಲಿಯೊಂದರಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬಿಜೆಪಿ ಕಾರ್ಯಕರ್ತರು ಊಟ ಮಾಡುವ ಜಾಗಕ್ಕೆ ಬರುವ ವೇಳೆಗಾಗಲೇ ‘ವಿರೋಧ ಪಕ್ಷ’ದ ಕಾರ್ಯಕರ್ತರು ಬಂದು ಇದ್ದಬದ್ದ ಊಟವನ್ನೆಲ್ಲಾ ಉಂಡು ಹೋಗಿದ್ದರು.

ಟಿಎಂಸಿ ಪಕ್ಷದ ಕೌನ್ಸಿಲರ್‌ ಐಜುಲ್ ರಹಮಾನ್‌ ಹಾಗೂ ಆತನ ಸಂಗಡಿಗರು ಈ ‘ಲೂಟಿ’ ಮಾಡಿರುವುದಾಗಿ ಬಿಜೆಪಿ ಕಾರ್ಯಕರ್ತರು ಗಂಭೀರ ಆಪಾದನೆ ಮಾಡುತ್ತಿದ್ದಾರೆ. ಆದರೆ ಈ ಆರೋಪಗಳನ್ನು ರಹಮಾನ್ ತಳ್ಳಿ ಹಾಕಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗಳು ಸನಿಹವಾಗುತ್ತಿರುವಂತೆಯೆ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಜಟಾಪಟಿಗಳು ರಂಗೇರುತ್ತಿವೆ.