ದಾವಣಗೆರೆ: ಮೋದಿಯವರು ಏನೇ ಮಾತನಾಡಿದರೂ ಸುಮ್ಮನೆ ಇರುವ ಚುನಾವಣಾ ಆಯೋಗದ ಬಗ್ಗೆ ನಾವು ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮೋದಿಯವರು ಉದ್ಯೋಗ ಸೃಷ್ಠಿ ಮಾಡಿದ್ದೇನೆ, ಮತ ನೀಡಿ ಎಂದು ಕೇಳುತ್ತಿಲ್ಲ. ಪಾಕ್ ಮೇಲೆ ಯುದ್ಧ ಮಾಡಿದ್ದೇವೆ ವೋಟ್ ಕೊಡಿ ಎನ್ನುತ್ತಿದ್ದಾರೆ. ಈ ರೀತಿ ಬಹಿರಂಗವಾಗಿ ವೇದಿಕೆ ಮೇಲೆ ಹೇಳಿದರೂ ಚುನಾವಣಾ ಆಯೋಗ ಏನೂ ಮಾಡುತ್ತಿಲ್ಲ ಎಂದರು.!