ಚಿತ್ರದುರ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಸರ್ಕಾರವು ಮೊಟ್ಟ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿ ಕುಶಲಕರ್ಮಿಗಳನ್ನು ಗುರುತಿಸುವ ಯೋಜನೆ ರೂಪಿಸಿರುತ್ತದೆ. ಈ ಯೋಜನೆಯಿಂದ ವಿಶ್ವಕರ್ಮ ಜನಾಂಗದವರಿಗೆ ಚಿನ್ನ ಮತ್ತು ಬೆಳ್ಳಿ ಕೆಲಸಗಾರರು ಎನ್ನುವ ಸರ್ಕಾರದ ಅಧೀಕೃತ ಗುರುತಿನ ಪತ್ರ ದೊರೆಯುತ್ತಿರುವುದು ತುಂಬ ಸಂತೋಷದ ವಿಚಾರವಾಗಿರುತ್ತದೆ. ಈ ಯೋಜನೆಗೆ ಯಾವುದೇ ತರಹದ ವೆಚ್ಚ ಅಥವಾ ಸರ್ಕಾರಿ ಶುಲ್ಕ ಇರುವುದಿಲ್ಲ. ಬದಲಿಗೆ ಈ ಯೋಜನೆಯಲ್ಲಿ ನೋಂದಾಯಿಸಿ ತರಬೇತಿ ಪಡೆದುಕೊಂಡರೆ ಸರ್ಕಾರದಿಂದಲೇ 500 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಚಿತ್ರದುರ್ಗ ಜಿಲ್ಲೆಯ ಸಮಸ್ತ ವಿಶ್ವಕರ್ಮ ಬಾಂದವರು ನೋಂದಾಯಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 15-07-2018 ನೇ ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಸರಿಯಾಗಿ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ, ಬುರುಜಿನಹಟ್ಟಿ ರಸ್ತೆ, ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್‍ನ ಅಧ್ಯಕ್ಷರಾದ ಎ.ಶಂಕರಚಾರ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು,

ಹೆಚ್ಚಿನ ಮಾಹಿತಿಗಾಗಿ 9880121005 (ಶಂಕರ್),

9448345515 (ಸತ್ಯನಾರಾಯಣ) ಸಂಪರ್ಕ ಮಾಡಬಹುದಾಗಿದೆ

(ಸಾಂದರ್ಭಿಕ ಚಿತ್ರ)