ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ:  ಆದರೆ ಮನೆಯೊಳಗಿನ ಚಿತ್ರೀಕರಣಕ್ಕೆ ಮಾತ್ರ ಅವಕಾಶ.!

ಬೆಂಗಳೂರು: ಸಿರಿಯಲ್ ಗಳು ಇಲ್ಲದೆ ಮಹಿಳೆಯರಿಗೆ ಬೇಸರವಾಗಿತ್ತು. ಏಕೆಂದರೆ ಧಾರವಾಹಿಗಳ ಚಿತ್ರಿಕರಣ ಇಲ್ಲದೆ ಹಳೇ ಧಾರವಾಹಿಗಳನ್ನು ನೋಡಿದ ಮಹಿಳೆಯರಿಗೆ ಖುಷಿ ಸುದ್ದಿ ಏನಂದ್ರೆ  ಧಾರಾವಾಹಿಗಳ ಚಿತ್ರೀಕರಣ ಆರಂಭಕ್ಕೆ ರಾಜ್ಯ ಸರ್ಕಾರವು ಒಪ್ಪಿಗೆ. ಈ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ಈ ವೇಳೆ, ಕಿರುತೆರೆ ಕಲಾವಿದರು ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಚಿತ್ರೀಕರಣಕ್ಕೆ ಒತ್ತಡ ಹೇರಿದ ಪರಿಣಾಮ ಧಾರವಾಹಿ, ರಿಯಾಲಿಟಿ ಶೋ, ಸಿನೆಮಾ ಎಲ್ಲವನ್ನೂ ಮನೆಯೊಳಗೇ ಚಿತ್ರೀಕರಣ ನಡೆಸಲು ಅವಕಾಶ ನೀಡಲಾಗಿದೆ. ರಸ್ತೆ ಅಥವಾ ಹೊರಗಡೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಧಾರಾವಾಹಿಗಳ ಚಿತ್ರೀಕರಣ ಆರಂಭಕ್ಕೆ ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಸ್ಥಗಿತಗೊಂಡಿದ್ದ ಎಲ್ಲಾ ಧಾರಾವಾಹಿಗಳ ಚಿತ್ರೀಕರಣವು ಮುಂದಿನ ಒಂದು ವಾರದ ಒಳಗೆ ಆರಂಭವಾಗಲಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಚಿತ್ರೀಕರಣ ಸ್ಥಗಿತದಿಂದ ಚಿತ್ರರಂಗವನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಸರಕಾರ ಧಾರವಾಹಿಗಳ ಚಿತ್ರಕರಣ ನಡೆಯುತ್ತದೆ. ಮತ್ತೆ ಹೆಂಗಳಯರಿಗೆ ಖುಷಿ ಅಲ್ವ.