ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿಹಟ್ಟಿ ಗ್ರಾಮದಲ್ಲಿ ಸೂಕ್ಷ್ಮ ಶಿಲಾಯುದಗಳು ಪತ್ತೆಯಾಗಿವೆ. ಸಂಶೋಧಕರಾದ ಮಹೇಶ್ ಕುಂಚಿಗನಾಳ್ ಇವರ ಮಾರ್ಗದರ್ಶನ ಮತ್ತು ಸಲಹೆ ಮೇರೆಗೆ ಕವಿ ಸಣ್ಣಗೌಡ್ರು ನಾಗರಾಜ್, ಇವುಗಳನ್ನು ಬೆಳಕಿಗೆ ತಂದಿದ್ದಾರೆ. ಈ ಶಿಲಾಯುಧಗಳು ನವಶಿಲಾಯುಗದ ಕಾಲಕ್ಕೆ ಸೇರಿವೆ. ಇವುಗಳ ಕಾಲ ಕ್ರಿ.ಪೂ. 5000 ದಿಂದ ಕ್ರಿ.ಪೂ 2000 ಈ ಶಿಲಾಯುಧಗಳನ್ನು ಗ್ರಾಮದ ಜನರು ಕೆರೆಕೋಡಿಯಮ್ಮ ದೇವರೆಂದು ಪೂಜಿಸುತ್ತಿದ್ದಾರೆ. ಈ ಶಿಲಾಯುಧಗಳನ್ನು ಉಜ್ಜಿ ನಯಗೊಳಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಮಾನವನು ಇಲ್ಲಿ ನೆಲೆಸಿದ್ದ ಎಂಬುದನು. ಧೃಡಪಡಿಸುತ್ತವೆ. ಮತ್ತು ಆದಿ ಮಾನವನ ಜೀವನದ ಹೆಜ್ಜೆ ಗುರುತುಗಳ ಮೇಲೆ ಬೆಳಕು ಚೆÀಲ್ಲುತ್ತವೆ. ಇಂತಹ ನೆಲೆಗಳ ಮೇಲೆ ಪ್ರಾಕ್ತನ ತಜ್ಞರು ಮತ್ತು ಸಂಶೋಧಕರು ಗಮನ ಹರಿಸಬೇಕೆಂದು ಕವಿ ಸಣ್ಣಗೌಡ್ರು ನಾಗರಾಜ್ ತಿಳಿಸಿದ್ದಾರೆ.