ಚಿತ್ರದುರ್ಗ: ತಾಲ್ಲೂಕಿನ ೩೮ ಗ್ರಾ.ಪಂ.ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಯಿತು. ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಮೀಸಲಾತಿ ನಿಗದಿಪಡಿಸುವ ನಿಟ್ಟಿನಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮೀಸಲಾತಿ ಪ್ರಕಟಿಸಿದರು.
ತುರುವನೂರು ಗ್ರಾ.ಪಂ. ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್.ಟಿ.ಗೆ ಮೀಸಲು ನಿಗದಿ ಮಾಡಲಾಗಿದೆ. ಭರಮಸಾಗರ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಹಿರೇಗುಂಟನೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ. ಮಠದಕುರುಬರಹಟ್ಟಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಟಿ. ಮಹಿಳೆ. ಲಕ್ಷ್ಮೀಸಾಗರ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ. ಹುಲ್ಲೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಮಹಿಳೆ. ಕಾಲ್ಗೆರೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಕೊಳಾಳು ಅಧ್ಯಕ್ಷ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಮದಕರಿಪುರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ. ಮೆದೇಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ.
ದೊಡ್ಡಸಿದ್ದವ್ವನಹಳ್ಳಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ. ಜಂಪಣ್ಣನಾಯಕನಕೋಟೆ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ದ್ಯಾಮವ್ವನಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಟಿ. ಮಹಿಳೆ. ಕೋಗುಂಡೆ ಅಧ್ಯಕ್ಷ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಸಿರಿಗೆರೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ. ಚಿಕ್ಕಬೆನ್ನೂರು ಅಧ್ಯಕ್ಷ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಐನಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ. ಆಲಗಟ್ಟ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ. ಸಿದ್ದಾಪುರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಯಳಗೋಡು ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
ಚಿಕ್ಕಗೊಂಡನಹಳ್ಳಿ ಅಧ್ಯಕ್ಷ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಮುದ್ದಾಪುರ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಮಾಡನಾಯಕನಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಇಸಾಮುದ್ರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಮಹಿಳೆ. ಚೋಳಗಟ್ಟ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಭೀಮಸಮುದ್ರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ. ಕೂನಬೇವು ಅಧ್ಯಕ್ಷ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಎಸ್.ಸಿ. ಗುಡ್ಡದರಂಗವ್ವನಹಳ್ಳಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಮಹಿಳೆ. ಜಾನುಕೊಂಡ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ. ಗೊಡಬನಾಳ್ ಅಧ್ಯಕ್ಷ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
ಬೆಳಗಟ್ಟ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಬೊಮ್ಮೇನಹಳ್ಳಿ ಅಧ್ಯಕ್ಷ ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಎಸ್.ಟಿ. ಅನ್ನೇಹಾಳ್ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ. ಸೊಂಡೆಕೊಳ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಗೂನೂರು ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ. ಅಳಗವಾಡಿ ಅಧ್ಯಕ್ಷ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಎಸ್.ಸಿ. ಇಂಗಳದಾಳ್ ಅಧ್ಯಕ್ಷ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಬ್ಯಾಲಹಾಳ್ ಗ್ರಾ.ಪಂ. ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲು ಮಾಡಿ ನಿಗದಿಪಡಿಸಲಾಗಿದೆ.