ಚಿತ್ರದುರ್ಗ: ಕೋರ್ಟ್ ನಲ್ಲಿ ಕೇಸ್ ಅಂದ್ರೆ ಸಾಕು ಸಾಮಾನ್ಯ ಜನರಲ್ಲಿ ಒಂದು ರೀತಿಯ ಆತಂಕ. ಏಕೆಂದ್ರೆ ಜಲ್ದಿ ಕೇಸ್ ಮುಗಿಯಲ್ಲ ಎಂಬ ಭಾವನೆ. ಆದ್ರೆ ಈ ಕೇಸ್ ಆರೀತಿಯಲ್ಲಿ ಅಲ್ಲದೆ ಕೊಲೆ ಆದ 11 ದಿನಗಳಲ್ಲಿ ಶಿಕ್ಷೆ ಪ್ರಕಟವಾದ ಘಟನೆ ದುರ್ಗದಲ್ಲಿ ನಡೆದಿದೆ. ಈ ಸುದ್ದಿ ಓದಿದ್ರೆ……

ಜು.6 ರಂದು  ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆಯನ್ನು 11 ದಿನಗಳಲ್ಲಿ ಪೂರ್ಣಗೊಳಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿರುವುದು ಇದೇ ಪ್ರಥಮ.

ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ ಪರಮೇಶ್ವರಪ್ಪ ಸ್ವಾಮಿ (75) ಶಿಕ್ಷೆಗೆ ಗುರಿಯಾದವರು. ಪತ್ನಿ ಪುಟ್ಟಮ್ಮ (63)ರನ್ನು ಜೂ.27ರಂದು ಪತ್ನಿ ಶೀಲ   ಶಂಕಿಸಿ ಕಲ್ಲು ಎತ್ತುಹಾಕಿ ಕೊಲೆ ಮಾಡಿದ್ದನು.

ಆದ್ರೆ 23 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸಿದ ದಾಖಲೆ ಉತ್ತರಪ್ರದೇಶದಲ್ಲಿದೆ.  ಇತಿಹಾಸದಲ್ಲಿಯೇ ತ್ವರಿತ ವಿಚಾರಣೆನಡೆಸಿದ 11 ದಿನಗಳಲ್ಲಿಯೇ ಆರೋಪಿಗೆ ಶಿಕ್ಷ ಆಗಿರುವುದು ಇದೇ ಮೊದಲಿರಬೇಕು.