ಚಿತ್ರದುರ್ಗ: ಚಿತ್ರದುರ್ಗ ನಗರದ ಬಿ.ಡಿ ರಸ್ತೆ ದುರಸ್ಥಿ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಮತ್ತು ರಸ್ತೆ ಸಂಚಾರ ನಿಯಂತ್ರಣಕ್ಕೆ ಚಿತ್ರದುರ್ಗ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ನಗರದ ಬಿ.ಡಿ. ರಸ್ತೆಯನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಕಿತ್ತು ಹಾಕಿದ್ದು, ಈ ರಸ್ತೆಯು ನಗರದ ಮುಖ್ಯ ರಸ್ತೆಯಾಗಿರುವುದರಿಂದ ಎಲ್ಲ ವಾಹನಗಳು ಇದೇ ರಸ್ತೆಯಲ್ಲೆ ಸಂಚರಿಸುತ್ತಿದ್ದು, ಶಾಲಾ ಮಕ್ಕಳು ಹಿರಿಯ ನಾಗರೀಕರು, ಮಹಿಳೆಯರು ಸಂಚಾರಿಸಲು ತೊಂದರೆಯಾಗುತ್ತಿದೆ. ಅಲ್ಲದೆ ಕಾಮಗಾರಿ ನೆಡೆಯುವ ರಸ್ತೆಯು ಕಿರಿದಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಗರಕ್ಕೆ ಬರುವ ಎಲ್ಲಾ ಭಾರಿ ವಾಹನಗಳ (ಸಿಟಿ ಬಸ್ ಹೊರತುಪಡಿಸಿ) ಸಂಚಾರವನ್ನು ತಾತ್ಕಾಲಿಕವಾಗಿ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ.

ಬದಲಿ ಮಾರ್ಗಗಳು: ಹೊಳಲ್ಕೆರೆ, ಶಿವಮೊಗ್ಗ ಹಾಗೂ ಹೊಸದುರ್ಗ ಮಾರ್ಗವಾಗಿ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್‍ಗಳು ಜೆ.ಎಮ್.ಐ.ಟಿ ಸರ್ಕಲ್ ಮುಖಾಂತರ ಮುರುಘಾಮಠದಿಂದ ಎನ್.ಹೆಚ್-13 ರಸ್ತೆ ಮಾರ್ಗವಾಗಿ ಹೋಗಬೇಕು. ಹೊಳಲ್ಕೆರೆ ರಸ್ತೆ ಮುಖಾಂತರ ಬಸ್ ನಿಲ್ದಾಣ ಪ್ರವೇಶಿಸಬೇಕು.

ದಾವಣಗೆರೆ ಮಾರ್ಗವಾಗಿ ಹೋಗುವ ಕೆಎಸ್‍ಆರ್‍ಟಿಸಿ ಬಸ್‍ಗಳು ಜೆ.ಎಂ.ಐಟಿ  ಸರ್ಕಲ್ ಮುಖಾಂತರ ಎನ್.ಹೆಚ್. ರಸ್ತೆ ಮಾರ್ಗವಾಗಿ  ಸಂಚರಿಸಬೇಕು.

ಜಗಳೂರು ಹೋಸಪೇಟೆ ಮಾರ್ಗ ಸಂಚರಿಸುವ ಬಸ್ಸಗಳು ಜೆ.ಎಂ.ಐ.ಟಿ  ಸರ್ಕಲ್ ಮುಖಾಂತರ ಹೊಸಪೇಟೆ ಎನ್.ಹೆಚ್ 13 ರಸ್ತೆ ಮಾರ್ಗ ಹೋಗಬೇಕು ಅದೇ ಮಾರ್ಗವಾಗಿ ಹಿಂತಿರುಗಬೇಕು.

ತುರುವನೂರು ಮಾರ್ಗವಾಗಿ ಸಂಚರಿಸುವ ಬಸ್‍ಗಳು ಜೆ.ಎಂ.ಐ.ಟಿ  ಸರ್ಕಲ್ ಮುಖಾಂತರ ತುರುವನೂರು ರಸ್ತೆ ಮಾರ್ಗವಾಗಿ, ಹಿಂತಿರುಗುವಾಗ ತುರುವನೂರು ರಸ್ತೆ ಮುಖಾಂತರ ಎನ್.ಹೆಚ್.48 ರಸ್ತೆಯಲ್ಲಿ  ಬಂದು ಜೆ.ಎಮ್.ಐಟಿ ಸರ್ಕಲ್ ಮಾರ್ಗ ಬರಬೇಕು.

ಚಳ್ಳಕೆರೆ ಮಾರ್ಗವಾಗಿ ಬರುವ ಬಸ್‍ಗಳು ಜೆ.ಎಂ.ಐಟಿ  ಸರ್ಕಲ್ ಮುಖಾಂತರ ಎನ್.ಹೆಚ್. 48 ರಸ್ತೆ ಮಾರ್ಗವಾಗಿ ಹೋಗಬೇಕು. ಎನ್.ಹೆಚ್.48 ರಸ್ತೆಯಲ್ಲಿ  ಬಂದು ಜೆ.ಎಮ್.ಐಟಿ ಸರ್ಕಲ್ ಮಾರ್ಗದಲ್ಲಿ ಬರಬೇಕು.

ಬೆಂಗಳೂರು ಮಾರ್ಗವಾಗಿ ಹೋಗುವ ಬಸ್‍ಗಳು ಜೆ.ಎಂ.ಐಟಿ  ಸರ್ಕಲ್ ಮುಖಾಂತರ ಎನ್.ಹೆಚ್. 48 ರಸ್ತೆ ಮಾರ್ಗವಾಗಿ ಹೋಗಬೇಕು. ಎನ್.ಹೆಚ್.48 ರಸ್ತೆಯಲ್ಲಿ  ಬಂದು ಜೆ.ಎಮ್.ಐಟಿ ಸರ್ಕಲ್ ಮಾರ್ಗದಲ್ಲಿ ಬರಬೇಕು.

ಖಾಸಗಿ ಬಸ್ ಮಾರ್ಗಗಳು: ಹೊಳಲ್ಕೆರೆ, ಶಿವಮೊಗ್ಗ ದಾವಣಗೆರೆ ಹಾಗೂ ಹೊಸದುರ್ಗ ಮಾರ್ಗ ಸಂಚಾರಿಸುವ ಬಸ್ಸಗಳು ಮೆದೆಹಳ್ಳಿ ಅಂಡರ್ ಬ್ರಿಡ್ಜ್ ಮುಖಾಂತರ ಮುರುಘಾಮಠದಿಂದ ಎನ್.ಹೆಚ್.ರಸ್ತೆ ಮಾರ್ಗವಾಗಿ ಹೋಗಿ ಹೊಳಲ್ಕೆರೆ ರಸ್ತೆ ಮುಖಾಂತರ ಹಿಂತಿರುಗಬೇಕು.

ಜಗಳೂರು ಹೋಸಪೇಟೆ ಹೋಗುವ ಬಸ್‍ಗಳು ಮೆದೆಹಳ್ಳಿ ಅಂಡರ್ ಬ್ರಿಡ್ಜ್ ಮುಖಾಂತರ ಹೊಸಪೇಟೆ ರಸ್ತೆ ಮಾರ್ಗವಾಗಿ ಹೋಗಬೇಕು. ಅದೇ ಮಾರ್ಗವಾಗಿ ಹಿಂತಿರುಗಬೇಕು.

ತುರುನೂರು ಮಾರ್ಗವಾಗಿ ಹೋಗುವ ಬಸ್‍ಗಳು ಮೇದೆಹಳ್ಳಿ ಅಂಡರ್ ಮುಖಾಂತರ ಸಂಚಾರಿಸಿ ತುರುವನೂರು ರಸ್ತೆ ಮಾರ್ಗವಾಗಿ ಮೇದೆಹಳ್ಳಿ ಅಂಡರ ಬ್ರಿಡ್ಜ್ ಮುಖಾಂತರ ಬರಬೇಕು.

ಚಳ್ಳಕೆರೆ ಮಾರ್ಗವಾಗಿ ಹೋಗುವ ಬಸ್‍ಗಳು ಮೇದೆಹಳ್ಳಿ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಎನ್.ಹೆಚ್.48 ರಸ್ತೆ ಮುಖಾಂತರ ಹೋಗಬೇಕು ಅದೇ ಮಾರ್ಗವಾಗಿ ಬರಬೇಕು.

ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ಸಗಳು ಮೇದೆಹಳ್ಳಿ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಎನ್.ಹೆಚ್.48 ರಸ್ತೆಯ ಮುಖಾಂತರ ಚಳ್ಳಕೆರೆ ರಸ್ತೆ ಮಾರ್ಗ ಹೋಗಬೇಕು, ಅದೇ ಮಾರ್ಗವಾಗಿ ಹಿಂತಿರುಗಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಪ್ರಕಟಣೆಗೆ ತಿಳಿಸಿದ್ದಾರೆ.