ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018 ಕ್ಕೆ ಸಂಬಂಧಿಸಿದಂತೆ ಚುನಾವಣೆಯನ್ನು ಸುಸೂತ್ರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜೋತ್ಸ್ನ ಆದೇಶ ಮಾಡಿದ್ದಾರೆ. ಅಧಿಕಾರಿಗಳ ಹೆಸರು, ಕ್ಷೇತ್ರ, ದೂರವಾಣಿ ನಂ, ವಿವರ ಹೀಗಿದೆ.

ಮೊಳಕಾಲ್ಮೂರು 97, ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಲಕ್ಷ್ಮಣ್ ಎಸ್.ಕಳ್ಳೆಣ್ಣವರ್, ಮೊ: 8277930950, ಈಮೇಲ್ ಸಹಾಯಕ ಚುನಾವಣಾಧಿಕಾರಿ ಸೈಯದ್ ನವೀದ್ ಹುಸೇನ್, ತಹಶೀಲ್ದಾರ್, ಮೊಳಕಾಲ್ಮೂರು, ಮೊ: 9742736526, ಚಳ್ಳಕೆರೆ 98, ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಜಂಟಿನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿನಿರ್ದೇಶಕ ಬಿ.ಆನಂದ್, ಮೊ:9448004858, ಸಹಾಯಕ ಚುನಾವಣಾಧಿಕಾರಿಯಾಗಿ ಎಂ.ಬಸವರಾಜ್ ತಹಶೀಲ್ದಾರ್ ಚಳ್ಳಕೆರೆ, ಮೊ: 9448556100, ಚಿತ್ರದುರ್ಗ 99 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ಜವರೇಗೌಡ, ಮೊ:9739979308, ಸಹಾಯಕ ಚುನಾವಣಾಧಿಕಾರಿಯಾಗಿ ಮೋಹನ್‍ಕುಮಾರ್, ತಹಶೀಲ್ದಾರ್, ಚಿತ್ರದುರ್ಗ, ಮೊ:9845352081, ಹಿರಿಯೂರು 100, ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್, ಮೊ: 9480861001, ಸಹಾಯಕ ಚುನಾವಣಾಧಿಕಾರಿಯಾಗಿ ಜೆ.ಬಿ.ಮಜ್ಜಿಗಿ, ತಹಶೀಲ್ದಾರ್, ಹಿರಿಯೂರು, ಮೊ: 9620972112, ಹೊಸದುರ್ಗ 101, ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಯೋಜನಾ ನಿರ್ದೇಶಕರಾದ ರಾಜಶೇಖರ್, ಮೊ:9900971051, ಸಹಾಯಕ ಚುನಾವಣಾಧಿಕಾರಿಯಾಗಿ ಕವಿರಾಜ್ ಎಂ.ಪಿ. ತಹಶೀಲ್ದಾರ್, ಹೊಸದುರ್ಗ, ಮೊ:9743632240, ಹೊಳಲ್ಕೆರೆ 102 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಪರಿಸರ ಅಧಿಕಾರಿ ಬಿ.ಎಸ್.ಮುರುಳೀಧರ್, ಮೊ:9945497095, ಸಹಾಯಕ ಚುನಾವಣಾಧಿಕಾರಿಯಾಗಿ ಎಂ.ಭಾಗ್ಯ, ತಹಶೀಲ್ದಾರ್, ಹೊಳಲ್ಕೆರೆ, ಮೊ:8147242417.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಸಾರ್ವಜನಿಕರಿಗೆ ಕಂಡುಬಂದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ದೂರವಾಣಿ, ಮೊಬೈಲ್‍ಗಳಿಗೆ ಸಂಪರ್ಕಿಸಲು ಕೋರಿದೆ.