ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಚುನಾವಣೆ ನಡೆದಿದ್ದು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ 5 ವಿಧಾನಸಭೆ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ಒಂದು ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಭ್ಯರ್ಥಿ ಜಯಗಳಿಸಿದ್ದಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ಶ್ರೀರಾಮುಲು 84018 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಾ: ಬಿ.ಯೋಗೀಶ್‍ಬಾಬು ಅವರಿಗಿಂತ 42045 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಡಾ: ಯೋಗೀಶ್‍ಬಾಬು ಅವರು 41973 ಮತಗಳನ್ನು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರು 41152 ಮತಗಳನ್ನು ಪಡೆದಿರುತ್ತಾರೆ. ಜನತಾದಳ(ಜಾತ್ಯಾತೀತ) ಪಕ್ಷದ ಅಭ್ಯರ್ಥಿ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ 15262 ಮತಗಳನ್ನು ಪಡೆದಿರುತ್ತಾರೆ.
ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೆ.ರಾಘವೇಂದ್ರ 1427, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಪಿ.ಸುಮಲತ 791, ಪಕ್ಷೇತರ ಅಭ್ಯರ್ಥಿಗಳಾದ ಬಿ.ಗಿರೀಶ 409, ಎಸ್.ಚಂದ್ರಣ್ಣ ಎತ್ತನಹಟ್ಟಿ 3223, ಎಸ್.ಚಂದ್ರಣ್ಣ 725, ಎಸ್.ಪಿ.ರಾಜು 1366, ಡಿ.ಹೆಚ್.ಪರಮೇಶ್ವರಪ್ಪ 842 ಮತ ಪಡೆದಿರುತ್ತಾರೆ. ನೋಟಾ ಮತ 1361 ಚಲಾಯಿಸಲಾಗಿದೆ. ಮೊಳಕಾಲ್ಮೂರಿನಲ್ಲಿ ಒಟ್ಟು 192621 ಮತಗಳು ಚಲಾವಣೆಯಾಗಿವೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್ 90562 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಜಿ.ಗೋವಿಂದಪ್ಪ ಅವರಿಗಿಂತ 25992 ಮತಗಳ ಅಂತರದಿಂದ ಜಯಶಾಲಿಯಾಗಿರುತ್ತಾರೆ. ಬಿ.ಜಿ.ಗೋವಿಂದಪ್ಪ 64,570 ಮತಗಳನ್ನು ಪಡದಿರುತ್ತಾರೆ. ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಶಶಿಕುಮಾರ್ 1575 ಮತಗಳನ್ನು ಪಡೆದಿರುತ್ತಾರೆ. ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಪ್ರಕಾಶಮೂರ್ತಿ 188, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಭ್ಯರ್ಥಿ ಮಂಜುನಾಥ್ ವಿ.ಬಂಡ್ರೆ 141, ಪಕ್ಷೇತರ ಅಭ್ಯರ್ಥಿಗಳಾದ ಎಂ.ಹೆಚ್.ಸತೀಶ್ ಜಂಗಮ 562, ಸಮಂತ್ ಎ.ಆರ್. 287,. ಸಿ.ಎಸ್.ತ್ಯಾಗರಾಜನ್ 221, ಜಿ.ಆರ್.ರೇವಣ್ಣ ಗೊರವಿನಕಲ್ಲು 157, ಬಿ.ಟಿ.ಗಿರೀಶ್ 135, ಎಂ.ಸಿ.ಧನಂಜಯ 122 ಮತ ಪಡೆದಿದ್ದು, ನೋಟಾಮತ 1326 ಚಲಾಯಿಸಲಾಗಿದೆ. ಹೊಸದುರ್ಗದಲ್ಲಿ ಒಟ್ಟು 159846 ಮತಗಳು ಚಲಾವಣೆಯಾಗಿವೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ರಘುಮೂರ್ತಿ 72874 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಜಾತ್ಯಾತೀತ ಜನತಾದಳ ಪಕ್ಷದ ಎಂ.ರವೀಶ್‍ಕುಮಾರ್ ಅವರಿಗಿಂತ 13539 ಮತಗಳ ಅಂತರದಿಂದ ಜಯಶಾಲಿಯಾಗಿರುತ್ತಾರೆ. ಎಂ.ರವೀಶ್‍ಕುಮಾರ್ 59335 ಮತಗಳನ್ನು ಪಡದಿರುತ್ತಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಟಿ..ಕುಮಾರಸ್ವಾಮಿ 33471 ಮತಗಳನ್ನು ಪಡೆದಿರುತ್ತಾರೆ. ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಕೆ.ಪಿ.ಭೂತಯ್ಯ 1590 ಮತಗಳನ್ನು ಪಡೆದಿರುತ್ತಾರೆ. ನೋಟಾಮತ 1730 ಚಲಾಯಿಸಲಾಗಿದೆ. ಚಳ್ಳಕೆರೆ ಕ್ಷೇತ್ರದಲ್ಲಿ ಒಟ್ಟು 169000 ಮತಗಳು ಚಲಾವಣೆಯಾಗಿವೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ 81632 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗಿಂತ 32226 ಮತಗಳ ಅಂತರದಿಂದ ಜಯಶಾಲಿಯಾಗಿರುತ್ತಾರೆ. ಕೆ.ಸಿ.ವೀರೇಂದ್ರ ಅವರು 49406 ಮತಗಳನ್ನು ಪಡದಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಎಸ್.ಷಣ್ಮುಖಪ್ಪ (ಹನುಮಲಿ) 48638 ಮತಗಳನ್ನು ಪಡೆದಿರುತ್ತಾರೆ. ಎಸ್.ಜೆ.ಪಿ. ಪಕ್ಷದ ಅಭ್ಯರ್ಥಿ ಜಗದೀಶ್ 610, ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಡಾ:ದೊಡ್ಡಮಲ್ಲಯ್ಯ 343, ಭಾರತೀಯ ಜನಶಕ್ತಿ ಕಾಂಗ್ರೆಸ್ ಬಿ.ಶಾಮಸುಂದರ ಕುಲಕರ್ಣಿ 328, ಎಂ.ಇ.ಪಿ. ಪಕ್ಷದ ಸೈಯದ್ ಇಸ್ಮಾಯಿಲ್ 183, ಕೆ.ಎಸ್.ಆರ್.ಕೆ.ಪಿ ಪಕ್ಷದ ಜಿ.ಎಸ್.ನಾಗರಾಜ್ 183, ಕನ್ನಡ ಪಕ್ಷದ ರಾಜಮದಕರಿನಾಯಕ 153, ಸಮಾಜವಾದಿ ಪಕ್ಷದ ಕೆ..ಎಸ್.ಸರಸ್ವತಿ 154, ಕೆ.ಜೆ.ಪಿ. ಪಕ್ಷದ ಅಭ್ಯರ್ಥಿ ಹೆಚ್.ಎಂ.ಹನುಮಂತಪ್ಪ 131, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ 262, ಎಂ.ಕಿರಣ್ 216, ಎನ್.ಸುರೇಶ್ 1284, ವಿ.ಎಸ್.ಭೂತರಾಜ್ 994, ಎಂ.ಟಿ.ಚಂದ್ರಣ್ಣ 788 ಹಾಗೂ ಟಿ.ಎಸ್.ಪುಟ್ಟಸ್ವಾಮಿ 466 ಮತಗಳನ್ನು ಪಡೆದಿದ್ದಾರೆ. ನೋಟಾಮತ 1326 ಚಲಾಯಿಸಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 187192 ಮತಗಳು ಚಲಾವಣೆಯಾಗಿವೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಪೂರ್ಣಿಮಾ 77733 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಿ.ಸುಧಾಕರ್ ಅವರಿಗಿಂತ 12875 ಮತಗಳ ಅಂತರದಿಂದ ಜಯಶಾಲಿಯಾಗಿರುತ್ತಾರೆ. ಡಿ.ಸುಧಾಕರ್ 64,858 ಮತಗಳನ್ನು ಪಡದಿರುತ್ತಾರೆ. ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಯಶೋಧರ 42044 ಮತಗಳನ್ನು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿಗಳಾದ ಡಾ: ನಾಗೇಂದ್ರಯ್ಯ 758, ಎಂ.ಪಿ.ಶ್ರೀರಂಗನಾಥ 415,. ಎಸ್.ಆರ್.ರಂಗಸ್ವಾಮಿ. 329, ರಂಗಯ್ಯ ಎಸ್. 223. ಮಹೇಶ್ ಆರ್.758, ಹೆಚ್.ಲೋಕೇಶ್ 137, ಎನ್.ವಿಜಯಲಕ್ಷ್ಮಿ 229, ಶಶಿಕಾಂತ್ ಸಿ.ಎಂ. 144, ಎ.ಶಿವಶಂಕರಪ್ಪ 177, ಸಮೀವುಲ್ಲ 313 ಮತಗಳನ್ನು ಪಡೆದಿದ್ದಾರೆ. ನೋಟಾಮತ 1160 ಚಲಾಯಿಸಲಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 188869 ಮತಗಳು ಚಲಾವಣೆಯಾಗಿರುತ್ತವೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂ.ಚಂದ್ರಪ್ಪ ಇವರು 107976 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ಆಂಜನೇಯ ಅವರಿಗಿಂತ 38940 ಮತಗಳ ಅಂತರದಿಂದ ಜಯಶಾಲಿಯಾಗಿರುತ್ತಾರೆ. ಹೆಚ್.ಆಂಜನೇಯ 69036 ಮತಗಳನ್ನು ಪಡದಿರುತ್ತಾರೆ. ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಗದ್ದಿಗೆ 3553 ಮತಗಳನ್ನು ಪಡೆದಿರುತ್ತಾರೆ. ರಿಪಬ್ಲಿಕನ್ ಸೇನಾ ಪಕ್ಷದ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ 215, ಭಾರತೀಯ ಜನಶಕ್ತಿಕಾಂಗ್ರೆಸ್‍ನ ದಯಾನಂದ ಟಿ. 268, ಅಂಬೇಡ್ಕರ್ ಸಮಾಜ ಪಾರ್ಟಿಯಿಂದ ನಿರಂಜನ ಎ.ಡಿ.ಚೀಳಂಗಿ 523, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯಿಂದ ಜಿ.ಎನ್.ಪರಮೇಶ್ 191, ಸಮಾಜವಾದಿ ಪಾರ್ಟಿಯಿಂದ ಎಸ್.ಮೀಟ್ಯಾನಾಯ್ಕ 92, ಜನತಾದಳ(ಸಂಯುಕ್ತ)ದಿಂದ ಹೆಚ್.ರಾಮಚಂದ್ರಪ್ಪ 203, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಎಂ.ಹೆಚ್.ಶಶಿಧರ 119, ಪಕ್ಷೇತರರಾದ ಹೆಚ್.ಆಂಜನೇಯ 113, ಎಂ.ದುರುಗೇಶಪ್ಪ 94, ಎ.ಬಸವರಾಜ 139, ಹೆಚ್.ವಿಠ್ಠಲನಾಯ್ಕ 258, ಸಿ.ಟಿ.ವಿಶ್ವನಾಥ 684, ಜಿ.ಶಾಂತಪ್ಪ 1015, ಎಂ.ಹನುಮಕ್ಕ 1402, ಹನುಮಂತಪ್ಪ ದುರ್ಗಾ 1782, ಹೂಲಪ್ಪ ಆರ್. 281 ಹಾಗೂ ಹೊಳೆಯಪ್ಪ ಕೆ. ಇವರು 144 ಮತಗಳನ್ನು ಪಡದಿರುತ್ತಾರೆ. ನೋಟಾದಡಿ 398 ಮತಗಳು ಚಲಾವಣೆಯಾಗಿದೆ. ಒಟ್ಟು ಹೊಳಲ್ಕೆರೆ ಕ್ಷೇತ್ರದಲ್ಲಿ 188830 ಮತಗಳು ಚಲಾವಣೆಯಾಗಿವೆ.