ಚಿತ್ರದುರ್ಗ; ಜಿಲ್ಲೆಯಲ್ಲಿ ಅಕ್ಟೋಬರ್ 23 ರಂದು ಬಿದ್ದ ಮಳೆಯ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದಲ್ಲಿ 70.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ 1 ರಲ್ಲಿ 0.4 ಮಿ.ಮೀ, 2 ರಲ್ಲಿ 1.4, ಹಿರೇಗುಂಟನೂರು 2, ಭರಮಸಾಗರ 6.2, ಸಿರಿಗೆರೆ 15, ತುರುವನೂರು 30.2, ಐನಹಳ್ಳಿ 2.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ 52.6, ಡಿ.ಮರಿಕುಂಟೆ 8.2, ತಳಕು 0.4, ನಾಯಕನಹಟ್ಟಿ 2.2, ಹೊಳಲ್ಕೆರೆ ತಾ; ರಾಮಗಿರಿ 8, ಚಿಕ್ಕಜಾಜೂರು 14, ಬಿ.ದುರ್ಗ 6.4, ಹೊರಕೆರೆದೇವಪುರ 2, ತಾಳ್ಯ 4.2, ಹೊಸದುರ್ಗ 22.6, ಬಾಗೂರು 15, ಮತ್ತೋಡು 41.1, ಮಾಡದಕೆರೆ 24.1 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.