ಚಿತ್ರದುರ್ಗ:  ಮೊಳಕಾಲ್ಮೂರು ಹಾಗೂ ಕೋಲಾರದಲ್ಲಿ ಕೋಟಿ ಗಟ್ಟಲೆ ಹಣ ಸಾಗಿಸುತ್ತಿದ್ದ ಜಾಲವನ್ನು ಚುನಾವಣ ಅಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳ ಬೇದಿಸಿದ್ದಾರೆ.

ಮೊಳಕಾಲ್ಮೂರು ಎದ್ದಲಬೊಮ್ಮನಹಟ್ಟಿ ಬಳಿ ಅಧಿಕಾರಿಗಳಿ ಸ್ಕಾರ್ಪಿಯೋ ಕಾರಿನಲ್ಲಿ ಹಣ ಸಾಗಣೆ ಮಾಹಿತಿ ಮೇರೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಅಧಿಕಾರಿಗಳಿಂದ ಭಾರೀ ಮೊತ್ತದ ಹಣ ಜಪ್ತಿಮಾಡಲಾಗಿದೆ.

ಬಳ್ಳಾರಿ ಮೂಲದ ಸ್ಕಾರ್ಪಿಯೋ ವಾಹನದಲ್ಲಿ 2 ಕೋಟಿಗೂ ಹೆಚ್ಚುವನ್ನು ಸಾಗಿಸಲಾಗುತಿತ್ತು

ಸಿಮೆಂಟ್ ಲಾರಿಯಲ್ಲಿ ಹಣ ಸಾಗಾಣಿಕೆ.!

ಕೋಲಾರ: ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಸಿಮೆಂಟ್​ ಲಾರಿಯನ್ನು ಹೊರವಲಯದ ಕೊಂಡರಾಜನಹಳ್ಳಿ ಬಳಿ ಜಪ್ತಿ ಮಾಡಿರುವ ಪೊಲೀಸರು 70 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಸಿಮೆಂಟ್​ ಮೂಟೆಗಳ ಮಧ್ಯ ಹಣ ಇಟ್ಟು ಮುಳಬಾಗಿಲಿನಿಂದ ಬೆಂಗಳೂರಿನತ್ತ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.