ಚಿತ್ರದುರ್ಗ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸ್ಥಳೀಯ ನಾಯಕರಿಗೆ ಅನ್ಯಾಯ ಮಾಡಿತ್ತಿವೆ ಎಂಬ ಆರೋಪ ಪ್ರತಿಬಾರಿ ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಇತಿಹಾಸ ಕೂಡ ಈ ಆರೋಪಗಳನ್ನು ದೃಢೀಕರಿಸುತ್ತದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಒಂದೆರೆಡು ಉದಾಹರಣೆ ಬಿಟ್ಟರೆ ಬಹುತೇಕ ವಲಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ನೋವು ಇಲ್ಲಿನ ಬಹುತೇಕ ಆಕಾಂಕ್ಷಿಗಳನ್ನು ಕಾಡುತ್ತಿದೆ.

ಕಾಂಗ್ರೆಸ್, ಬಿಜೆಪಿ ಯಂಥ ರಾಷ್ಟ್ರೀಯ ಪಕ್ಷಗಳು ಕೂಡ ಸ್ಥಳೀಯರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಸಾಮಾಜಿಕ ನ್ಯಾಯ ಅನುಸರಿಸಿಲ್ಲ ಎಂಬ ದೂರಗಳಿವೆ. ಪ್ರತಿಬಾರಿ ಚುನಾವಣೆ ಬಂದಾಗ ಈ ಆಕ್ರೋಶ ವ್ಯಕ್ತವಾಗುತ್ತದೆ. ಆದರೆ ತಕ್ಕ ಉತ್ತರ ಸಿಗುತ್ತಿಲ್ಲ. ಮತ್ತೆ ವಲಸಿಗರು ಬಂದು ಅಧಿಕಾರ ಅನುಭವಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಬಿಸಿಸುದ್ದಿ.ಕಾಂ (bcsuddi.com) ವಲಸಿಗರಿಗೆ ಯಾಕೆ ಟಿಕೆಟ್ ? ಎಂಬ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಅಭಿಯಾನದ ಪೂರ್ವದಲ್ಲೇ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅವುಗಳನ್ನು ಇಲ್ಲಿ ಪ್ರಕಟಿಸಲಾಗುವುದು. ಈ ಅಭಿಯಾನ ಮುಂದುವರಿಯಲಿದೆ.

ಹೊಳಲ್ಕೆರೆ ಮತ್ತು ಹೊಸದುರ್ಗ 2 ತಾಲೂಕಿನಲ್ಲಿ ಹಾಲಿ ಭೋವಿ ಶಾಸಕರು ಇರುವುದರಿಂದ ನಮ್ಮ ಕ್ಷೇತ್ರಕ್ಕೆ ಎಸ್ಸಿ ಲೆಫ್ಟ್ ಸಮುದಾಯಕ್ಕೆ ಟಿಕೆಟ್ ನೀಡಿದರೆ ಉತ್ತಮವಾಗುತ್ತದೆ ಹಾಗೂ ಸಮ್ಮಿಶ್ರ ಸರ್ಕಾರ ಇರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷದಿಂದ ಒಂದೇ ಅಭ್ಯರ್ಥಿ ಆಗಿರುವುದರಿಂದ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಹೆಚ್ಚಿನ ಮತಗಳು ಭಾರತೀಯ ಜನತಾ ಪಾರ್ಟಿಗೆ ಬೀಳುತ್ತವೆ ಗೆಲುವಿಗೂ ಅನುಕೂಲವಾಗುತ್ತದೆ.

ರಾಘವೇಂದ್ರ ಕೆಸಿ, ಜಿಲ್ಲಾ ಕಾರ್ಯದರ್ಶಿ ಯುವ ಮೋರ್ಚಾ, ಚಿತ್ರದುರ್ಗ

ವಲಸಿಗರನ್ನು ಸೋಲಿಸಿ ಕಳಿಸಬೇಕಾದ ಅಗತ್ಯ ಇದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರ ವಲಸಿಗರು ಬರಲು ಮೂಲ ಕಾರಣ ಆಗಿದೆ. ಯಾಕೆಂದರೆ, ಇಲ್ಲಿಯ ಪರಿಶಿಷ್ಟರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಅನ್ಯರು ಸುಲಭವಾಗಿ ಜಯಗಳಿಸಲು ಸಾಧ್ಯವಾಗಿದೆ. ಅದಕ್ಕೆ ಸ್ಥಳಿಯರು ಒಗ್ಗಟ್ಟು ಪ್ರದರ್ಶಿಸಿ ಪಕ್ಷಾತೀತವಾಗಿ ಸ್ಥಳಿಯರಿಗೇ ಮತ ಚಲಾಯಿಸುವ ಮೂಲಕ ವಲಸಿಗರಿಗೆ ಪಾಠ ಕಲಿಸಬೇಕಾಗಿದೆ.

ಮಂಜುನಾಥ, ಪತ್ರಕರ್ತರು

ಚಿತ್ರದುರ್ಗ ಲೋಕಸಭಾ ಚುನಾವಣೆಗೆ ವಲಸಿಗರಿಗೆ ಟಿಕೆಟ್ ನೀಡುವುದನ್ನು ವಿಶ್ವ ಛಲವಾದಿ ಮಹಾಸಭಾ ಖಂಡಿಸುತ್ತದೆ.

ಎನ್.ಟಿ.ಸ್ವಾಮಿ

ಸ್ಥಳೀಯ ಅಭ್ಯರ್ಥಿ ಅಯ್ಕೆ ಸಮಾಜಿಕ ನ್ಯಾಯದ ಆಯ್ಕೆ.

ಶಿವು ಯಾದವ್, ಚಿತ್ರದುರ್ಗ

ಮೊದಲು ಸ್ಥಳಿಯ.ಅಭ್ಯರ್ಥಿ ಅವಕಾಶ ನೀಡಬೇಕು   ವಲಸಿಗರಿಗೆ ನಮ್ಮ ಬೆಂಬಲವಿರುವುದಿಲ್ಲ.

ನವೀನ್ ಕುಮಾರ್ ಎನ್ ಚಾಲುಕ್ಯ

ಆಳುವ ವರ್ಗದವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರನ ಬಗ್ಗೆ ಕಿಂಚಿತ್ತೂ ಗಮನವಿಲ್ಲ. ತುಂಗಭದ್ರಾ ಮೇಲ್ದಂಡೆ ಕಾಮಗಾರಿ,ತುಮಕೂರು ದಾವಣಗೆರೆ ರೈಲುಮಾರ್ಗ ಮರೆತೇ ಹೋಗಿವೆ.ಆಯ್ಕೆಯಾದ ಸಂಸದರು ಹೋರಾಟ ಮಾಡುವ ಬದಲು ಕಾಲಕಳೆದರು.ಮೀಸಲಾತಿ ಕ್ಷೇತ್ರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಹ ಪ್ರಗತಿ ಯಾಗಲಿಲ್ಲ.ಸಾಮೂಹಿಕವಾಗಿ ಜಾತ್ಯಾತೀತ ಪಕ್ಷಾತೀತವಾಗಿ ಪ್ರತಿ ಭಟನೆಗಳು ನಡೆಯಲಿಲ್ಲ.ಕುಡಿಯುವ ನೀರು ಮತ್ತು ಮೂಲಭೂತ ಸವಲತ್ತುಗಳನ್ನು ಪಡೆಯಲಾಗದ ಕ್ಷೇತ್ರ. ಹಾಸನ,ಬೆಂಗಳೂರು ಗ್ರಾಮೀಣ, ಸಂಸದನ್ನು ನೋಡಿದರೆ ನಾವು ಯಾವಯುಗದಲ್ಲಿ ಇದ್ದೇವೆ ಎಂಬ ವ್ಯಥೆ ಕಾಡುತ್ತಿದೆ.

ಮಾರಣ್ಣ

(ಅಭಿಯಾನದಲ್ಲಿ ನಿಮ್ಮ ಅಭಿಪ್ರಾಯ ದಾಖಲಿಸಬಹುದು)