ಬೆಂಗಳೂರು: ಕೋಟೆನಾಡಿಗೂ ಇದೀಗ ಕೊರೋನಾ ಕಂಟಕ ಎದುರಾಗಿದೆ. ಅಹಮದಾಬಾದ್ ನಿಂದ ಬಂದಂತ 15 ಜನರಲ್ಲಿ ಮೂವರಿಗೆ ಕೊರೋನಾ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಗ್ರೀನ್ ಝೋನ್ ನಲ್ಲಿದ್ದ ಚಿತ್ರದುರ್ಗಕ್ಕೂ ಕೊರೋನಾ ಕಾಲಿಟ್ಟು ಜಿಲ್ಲೆಯ ಜನರಿಗೆ ಬಿಗ್ ಶಾಕ್ ನೀಡಿದೆ.

ಒಟ್ಟು ರಾಜ್ಯದಲ್ಲಿಂದು 48 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ದಾವಣಗೆರೆ 14, ಬೆಳಗಾವಿ 11, ಉತ್ತರಕನ್ನಡ 12, ಬೆಂಗಳೂರು ನಗರ 7, ಚಿತ್ರದುರ್ಗ 3, ಬಳ್ಳಾರಿಯಲ್ಲಿ ಒಬ್ಬರಿಗೆ ‘ಕೊರೋನಾ’ ಪತ್ತೆಯಾಗುವ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ. ಇನ್ನು ಕೊರೋನಾಗೆ ಇದುವರೆಗೆ 30 ಜನ ಸಾವನ್ನಪ್ಪಿದ್ದರೇ, 376 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.