ಆಂಧ್ರಪ್ರದೇಶ: ಚಿತ್ತೂರಿನಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ತೀರ ಗಂಭೀರವಾಗಿದೆ.

ಬೈಕ್​ಗೆ ಗುದ್ದಿ, ಟ್ರಕ್​​ಗೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಬೆಂಗಳೂರು ನಿವಾಸಿಗಳಾದ ಶ್ರೀನಿವಾಸುಲು ರೆಡ್ಡಿ (55), ರತ್ನಮ್ಮ (49) ಮತ್ತು ವೆಂಕಟೇಶ್ವರ ರೆಡ್ಡಿ (29) ಸಾವನ್ನಪ್ಪಿದ್ದಾರೆ.

ಈ ದುರ್ಘಟನೆಯಲ್ಲಿ 24 ವರ್ಷದ ಶ್ರೀಶಾ ರೆಡ್ಡಿ ಎಂಬುವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.