ಬಾಣಂತನ ಆದ ನಂತರ ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಎಂತಃ ಬಡವರಾದರು ಸರಿ ತಾಯಿ ಮಗು ಜೊತೆಗೆ ಬೆಳ್ಳಿ ಬಟ್ಟಲನ್ನು ಕೊಡುವುದು ವಾಡಿಕೆ. ಏಕೆ ಬೆಳ್ಳಿ ಬಟ್ಟಲು ಕೊಡಬೇಕು ಎಂಬುದಕ್ಕೆ ಕೆಲವೊಂದು ವೈಜ್ಞಾನಿ ಕಾರಣ ಏನು ಎಂಬುದನ್ನು ನೋಡಿದ್ರೆ.?

ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮ ಏಕೆಂದ್ರೆ ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು ರಾಸಾಯನಿಕಗಳನ್ನು ಮಿಕ್ಸ್ ಮಾಡುವ ಕಾರಣ ಅವುಗಳಿಂದ ಹಾರ್ಮೋನ್ ಅಸಮತೋಲನ, ಬೊಜ್ಜು, ಕ್ಯಾನ್ಸರ್ ಬರುವ ಅಪಾಯವಿರುತ್ತದೆ.

ಹಾಗೇ ಬೆಳ್ಳಿಯ ಪಾತ್ರೆಗಳು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಮತ್ತು ಅವು ಬೆಳೆಯದಂತೆ ತಡೆಯುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ಬೇಗ ಕಲುಷಿತವಾಗುವುದಿಲ್ಲ. ಇದು ಮಗುವಿನ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗೆ ಕಾರಣವಾಗುವುದಿಲ್ಲ.

ಆದರೆ ಬೆಳ್ಳಿ ಪಾತ್ರೆಗಳಲ್ಲಿ ಯಾವುದೇ ವಿಷಕಾರಿ ವಸ್ತುಗಳನ್ನು ಸೇರಿಸುವುದಿಲ್ಲ. ಹಾಗಾಗಿ ಅದರಲ್ಲಿ ಆಹಾರ ಸಂಗ್ರಹಿಸಿದರೆ ಅಥವಾ ಮಗುವಿಗೆ ತಿನ್ನಿಸಿದರೆ ತುಂಬಾ ಒಳ್ಳೆಯದು.