ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶತಾಯ ಗತಾಯ 150 ಮಿಶನ್ ಮಾಡಬೇಕೆಂದು ಪಣ ತೊಟ್ಟು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮಠಗಳಿಗೆ ಭೇಟಿನೀಡುವುದು, ಸಮಾವೇಶದಲ್ಲಿ ಭಾಗವಹಸಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನಿಸುವ ಅಮಿತ್ ಶಾ ಆಗಮನಕ್ಕೆ ಖಾಲಿ ಕುರ್ಚಿಗಳ ಸ್ವಾಗತ ಕೋರಿರುವ ಘಟನೆ ನಡೆದಿದೆ.

ಹಾವೇರಿಯ ಕಾಗಿನೆಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಜನರ ಆಸನದ ವ್ಯವಸ್ಥೆ ಮಾಡಲಾಗಿತ್ತು . ಆದ್ರೆ ಸಮಾವೇಶದಲ್ಲಿ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿದ್ದು, ಬಿಜೆಪಿ ಹಿಂದುಳಿದ ವರ್ಗಗಳ ಬಗ್ಗೆ ಇರುವ ಕಾಳಜಿ ಹಿಡಿದ ಕನ್ನಡಿಯಂತ್ತಿತ್ತು ಎಂಬುದು ವಿರೋಧಿಗಳು ಅಂಬೋಣ.!