ಸೆಕೆಂಡ್ ಬಾಂಬೆ ಎಂದು ಕೆರೆಸಿಕೊಳ್ಳುವ ಚಳ್ಳಕೆರೆ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆದವು ಕಳೆದ ಎರಡು ಟರ್ಮ್ ನಿಂದ ಮೀಸಲು ಕ್ಷೇತ್ರವಾಗಿ ಬದಲಾಯಿತು. ಈ ಹಿಂದೆಲ್ಲಾ ಎಲ್ಲಾ ಸಮುದಾಯದವರನ್ನು ಆರಿಸಿ ಕಳುಹಿಸಿದ ಕ್ಷೇತ್ರ ಚಳ್ಳಕೆರೆ.

ಚಳ್ಳಕೆರೆ ಕ್ಷೇತ್ರದಲ್ಲಿ ಯಾರ್‍ಯಾರು ಆಯ್ಕೆ ಆಗಿದ್ರು.!

ಚಳ್ಳಕೆರೆ ಕ್ಷೇತ್ರ

ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗುವರೆಗೂ ಸಹ ಎಲ್ಲಾ ಸಮುದಾಯದವರಿಗೂ ಮಣೆಹಾಕಿದ ಕ್ಷೇತ್ರ. ೧೯೬೭ ರಲ್ಲಿ ಮೊದಲ ಬಾರಿಗೆ ಎ.ಭೀಮಪ್ಪನಾಯಕ ಟಿ.ಹನುಮಂತಪ್ಪ, ಎರಡು ಸಲ ಬಿಲ್.ಗೌಡರು, ವಿ.ಮಸಿಯಪ್ಪ, ಎನ್.ಜಯಣ್ಣ ನವರು ಎರಡು ಬಾರಿ ಹಾಗೂ ತಿಪ್ಪೇಸ್ವಾಮಿಯವರು ಮೂರು ಬಾರಿ ಶಾಸಕರಾಗದ್ದರು. ಒಮ್ಮೆ ದೇವೇಗೌಡರ ಮಂತ್ರಿ ಮಂಡಲದಲ್ಲಿ ಅಬಕಾರಿ ಮತ್ತು ಸಣ್ಣ ನೀರಾವರಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು. ಬಸವರಾಜ್ ಮಂಡಿ ಮಠ್ ಒಮ್ಮೆ ಆಯ್ಕೆ ಆಗಿದ್ದರು. ಎಸ್.ಟಿ. ಕ್ಷೇತ್ರವಾದಮೇಲೆ ತಿಪ್ಪೇಸ್ವಾಮಿ ಆಯ್ಕೆ ಆದರು. ಕಳೆದ ಸಲ ಚುನಾವಣೆಯಲ್ಲಿ ಟಿ.ರಘುಮೂರ್ತಿಯವರು ಪ್ರಥಮವಾಗಿ ವಿಧಾನಸಭೆಗೆ ಪ್ರವೇಶಮಾಡಿದ್ದಾರೆ.