ಬೆಂಗಳೂರು : ಚಳಿಗಾಲದ ಅಧಿವೇಶನ ನಡೆದ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂಬ ಸುದ್ದಿ ಹರಿದಾಡುತ್ತಿದೆ. ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದ. ಶಾಸಕರಿಗೆ ಇಂದಿನ ಸಮನ್ವಯ ಸಮಿತಿ ಸಭೆ ದೊಡ್ಡ ಶಾಕ್ ನೀಡಿದ್ದು, ದೋಸ್ತಿ ಸರ್ಕಾರದಲ್ಲಿ ಖಾಳಿ ಉಳಿದಿರುವ ಸಚಿವ ಸ್ಥಾನಗಳನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಬಳಿಕ ನಿರ್ಧಾರ ಮಾಡಲಾಗುತ್ತೆದೆ ಎಂದು ತಿಳಿದುಬಂದಿದೆ.

ಈಗಾಗಲೇ ದೋಸ್ತಿ ಸರ್ಕಾರದ ಸಚಿವ ಆಕಾಂಕ್ಷಿಗಳು ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡಿಕೆಯಿಂದ ಅಸಮಾಧಾನಗೊಂಡಿದ್ದರು, ಹೀಗಾಗಿ ಹಲವು ಸಚಿವ ಆಕಾಂಕ್ಷಿಗಳು ಬಹಿರಂಗವಾಗಿಯೇ ಸಚಿವ ಸಂಪುಟ ವಿಸ್ತರಣೆ ಆಗದಿದ್ದರೆ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದ್ರೆ ಈಗಿರುವ ಸನ್ನಿವೇಶದಲ್ಲಿ ಸಚಿವ ಸ್ಥಾನ ಮುಂದಕ್ಕೆ ಹಾಕುವುದೇ ಒಳ್ಳೆಯದೆಂದು ಸಮನ್ವಯ ಸಮತಿ ತೀರ್ಮಾನಿಸಿದೆ ಎಂದು ತಿಳಿದಬಂದಿದೆ.