ಕೆಲವು ಮೂಲಂಗಿ ಅಂದ್ರೆ ಸಾಕು ವಾಸನೆ ಎಂದು ಜರಿಯುವವರು ಇರುತ್ತಾರೆ. ಮೂಲಂಗಿ ಸಾರು, ಮೂಲಂಗಿ ಪಲ್ಯ ಬೇಡಪ್ಪ ಎಂದು ಹೇಳುವವರು ಇದ್ದಾರೆ.

ಆದ್ರೆ ಈ ಹಿಂದೆಲ್ಲಾ ಮೂಲಂಗಿ ಸೊಪ್ಪಿನಿಂದ ಪಲ್ಯ ಮಾಡಿ ತಿನ್ನುತಿದ್ದರು ಏಕೆಂದ್ರೆ ಮೂಲಂಗಿ ಸೊಪ್ಪು ಹಾಗೂ ಮೂಲಂಗಿ ತಿಂದ್ರೆ ಮೋಷನ್ ಸರಾಗವಾಗುತ್ತದೆ ಎಂದು ಹಿರಿಯರು ಹೇಳಿದನ್ನು ಕೇಳಿರುತ್ತೀರ. ಆದ್ರೆ ಮೂಲಂಗಿಯನ್ನು ಬಳಸುವುದರಿಂದ ಇನ್ನೂ ಅನೇಕ ದೇಹದ ಸಮಸ್ಯೆಗಳನ್ನು ದೂರ ಮಾಡಬಹುದು.

ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ರಕ್ತವನ್ನು ಶುದ್ಧೀಕರಿಸುತ್ತದೆ. ಅಜೀರ್ಣ ನಿವಾರಣೆಯಾಗುತ್ತದೆ. ಕಾಮಾಲೆ ರೋಗ, ಕಣ್ಣಿನ ತೊಂದರೆ ಇಲ್ಲವಾಗುತ್ತದೆ. ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆ ದೂರವಾಗುತ್ತದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಮೂಲಂಗಿಯನ್ನು ತಿನ್ನಲ್ಲಾ ಅಂದ್ರೆ.?