ಕೊಪ್ಪಳ:ನಿನ್ನೆ ಚಪ್ಪಲಿ ಚಿಹ್ನೆ ಬಗ್ಗೆ ಗೊಂದಲ ಏರ್ಪಟಿದ್ದು ಅಧಿಕಾರಿಗಳಿಗೂ ಹಾಗೂ ಮತದಾರರಿಗೂ ಏಕೆಂದ್ರೆ ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಚಿಹ್ನೆ ಯನ್ನು ನೀಡಲಾಗುತ್ತು. ಮತದಾನ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಚುನಾವಣೆಯ ಚಿಹ್ನೆ ಇರುವಂತೆ ಇಲ್ಲ ಎಂಬ ಚುನಾವಣಾ ಆಯೋಗದ ನಿಯಮದಿಂದ ವಿವಾದಕ್ಕೀಡಾಗಿದ್ದ ಚಪ್ಪಲಿಚಿಹ್ನೆ ಸಮಸ್ಯೆ ಈಗ ಬಗೆಹರಿದಿದೆ.

 

ಮತದಾನ ಕೇಂದ್ರದಲ್ಲಿ ಸಿಬ್ಬಂದಿ ಚಪ್ಪಲಿಯನ್ನು ಧರಿಸಿಕೊಂಡು ಬರಬಹುದು ಮತ್ತು ಮತದಾರರು ಚಪ್ಪಲಿ ಧರಿಸಿಕೊಂಡೇ ಬಂದು ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ಅವರು ತಿಳಿಸಿದ್ದಾರೆ. ಅನೇಕ ಚಿಹ್ನೆಗಳು ಮತಗಟ್ಟೆಯಲ್ಲಿಯೇ ಇರುತ್ತವೆ. ಹೀಗಾಗಿ, ಇದಕ್ಕೆ ಅಂಥ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.