ಬೆಂಗಳೂರು; ಗ್ರಾಮ ಪಂಚಾಯತ್ ಚುನಾವಣೆಗೆ ನಮ್ಮ ಪಕ್ಷ ರೆಡಿ ಇದೆ. ಆದ್ರೆ ಚುನಾವಣಾ ಆಯೋಗ ಮನಸ್ಸು ಮಾಡಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಈಗಾಗಲೇ ಅವಧಿ ಮುಗಿದಿರುವ ಗ್ರಾಮ ಪಂಚಾಯತ್ ಗಳ ಚುನಾವಣೆಗೆ ನಾವು ಸಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಎಲ್ಲರಿಗೂ ಕೂಡ ಉದ್ಯೋಗ ನೀಡಿದ್ದು, ಕೆಲಸ ಮುಗಿದ 15 ದಿನಗಳ ಒಳಗೆ ಹಳೆಯ ಬಾಕಿಯೂ ಸೇರಿದಂತೆ ಪೂರ್ಣ ಕೂಲಿಯನ್ನು ನೇರವಾಗಿ ಕೂಲಿ ಮಾಡಿದ್ದ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗಿದೆ. ಯಾವುದೂ ಬಾಕಿ ಉಳಿಸಿಕೊಂಡಿಲ್ಲ ಎಂದರು.