ಬೆಂಗಳೂರು: ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ, ಇದೀಗ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ‌.

ಇದರ ಅನ್ವಯ ಆಡಳಿತಾಧಿಕಾರಿಯು ಗ್ರಾ.ಪಂ. ಎಲ್ಲಾ ಅಧಿಕಾರ ಮತ್ತು ಕರ್ತವ್ಯಗಳನ್ನು ಚಲಾಯಿಸಬಹುದು. ಆದರೆ, ಗ್ರಾ.ಪಂ. ಹಣಕಾಸಿನ ವ್ಯವಹಾರವನ್ನು ಪಿಡಿಒ ಅವರೊಂದಿಗೆ ಜಂಟಿಯಾಗಿ ನಿರ್ವಹಿಸಿಕೊಂಡು, ಗ್ರಾಮ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.!