ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಆಯ್ಕೆಪಟ್ಟಿಯನ್ನು ಕಳೆದ ಮಾರ್ಚ್ 23 ರಂದು ಜಿಲ್ಲಾಧಿಕಾರಿಗಳ ಕಚೇರಿ ವೆಬ್‍ಸೈಟ್ http://chitradurga.nic.inನಲ್ಲಿ ಪ್ರಕಟಿಸಲಾಗಿತ್ತು.  ಇದೀಗ ಆಯ್ಕೆಯಾಗಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

        ಪರಿಶೀಲನಾ ಆಯ್ಕೆ ಪಟ್ಟಿಯಂತೆ ಸಾಮಾನ್ಯ ವರ್ಗ ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಳುಹಿಸಿರುವ ತಿಳುವಳಿಕೆ ಪತ್ರ ಮತ್ತು ನಮೂನೆಯಂತೆ ದೃಡೀಕೃತ ದಾಖಲೆ ಮತ್ತು ನಮೂನೆಯನ್ನು  ಮುದ್ದಾಂ ಅಥವಾ ನೊಂದಾಯಿತ ಅಂಚೆ ಮುಖಾಂತರ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರಿಗೆ ಜೂ. 24 ರ ಒಳಗಾಗಿ ಕಳುಹಿಸಬೇಕು.  ನಂತರ ಬಂದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.