ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 6012 ಗ್ರಾಮ ಪಂಚಾಯತ್ ಗಳಿವೆ. ಕೆಲವನ್ನು ಹೊರತುಪಡಿಸಿ ಎಲ್ಲಾ ಪಂಚಾಯತ್ ಗಳ ಅಧಿಕಾರಾವಧಿಯು ಜೂನ್ ಅಥವಾ ಜುಲೈ ವೇಳೆಗೆ ಮುಕ್ತಾಯವಾಗಲಿದೆ. ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಾವು ಮುಂದಿನ ಆರು ತಿಂಗಳ ಕಾಲ ಚುನಾವಣೆಗಳನ್ನು ನಡೆಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ  ಹೇಳಿದ್ದಾರೆ.

ಚುನಾವಣೆಯನ್ನು ಮುಂದಿನ ಆರು ತಿಂಗಳ ಕಾಲ ಮುಂದೂಡಿಕೆ ಮಾಡಲಿದ್ದು, ಗ್ರಾಮ ಸ್ವರಾಜ್ ಮತ್ತು 1993ರ ಪಂಚಾಯತ್ ಕಾಯಿದೆ ಅಡಿ ಆಡಳಿತ ಮಂಡಳಿಯನ್ನು ರಚಿಸಲಿದ್ದೇವೆ ಎಂದು ಹೇಳಿದ್ದಾರೆ.