ಚಿಕ್ಕಮಗಳೂರು: ಗ್ರಹಣಗಳು ಸಂಭವಿಸಿದಾಗ ಜ್ಯೋತಿಷಿಗಳು ತೊಂದರೆ ಆಗುತ್ತದೆ ಎಂದು ತಮಗೆ ತಿಳಿದಂತೆ ಹೇಳಿತ್ತಾರೆ. ಇನ್ನೂ ಪ್ರಗತಿಪರರು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವವರು ಗ್ರಹಣ ದಿಂದ ಏನು ತೊಂದರೆ ಆಗುವುದಿಲ್ಲ ಅಂತ ಹೇಳುತ್ತಾರೆ . ಆದರೆ ಇಲ್ಲೊಂದು ಗ್ರಾಮ ಯಾವುದನ್ನು ತಲೆಕಡೆಸಿಕೊಳ್ಳದೆ ಗ್ರಹಣ ಸಂಭವಿಸುವ  ಘಳಿಗೆ ಮುಂಚೆ ಖಾಲಿಮಾಡಿದ್ದಾರೆ.!

ಜ್ಯೋತಿಷಿಯ ಮಾತಿಗೆ ಹೆದರಿ ಹದಿನೈದು ವರ್ಷದಿಂದ ವಾಸವಾಗಿದ್ದ ಸ್ಥಳವನ್ನೇ ಅಲೆಮಾರಿ ಕುಟುಂಬಗಳು ತೊರೆದಿವೆ. ಹೀಗೆ ಜ್ಯೋತಿಷಿ ಮಾತು ಕೇಳಿ ಊರು ಬಿಟ್ಟು ಹೋಗಿರುವುದು ಒಂದೆರಡು ಕುಟುಬವಲ್ಲ. ಲೆಕ್ಕ ಹಾಕಿ ನೋಡಿದರೆ 60ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಊರು ತೊರೆದಿವೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬಾಳೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಎಂಬಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಈ ಸ್ಥಳದಲ್ಲಿ 29 ಜನ ಮೃತ ಪಟ್ಟಿದ್ದರು. ನೀವು ಈ ಜಾಗದಲ್ಲಿ ಇದ್ದರೆ ಎರಡು ದಿನದಲ್ಲಿ ಮೂರು ಹೆಣ ಬೀಳುತ್ತವೆ ಎಂದ ಜ್ಯೋತಿಷಿ ಮಾತನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ. ಇದು ನಿಜವೋ ಸುಳ್ಳು ಎಂಬುದು ಅವರವರ ಲೆಕ್ಕಾಚಾರಕ್ಕೆ ಬಿಟ್ಟ ವಿಚಾರ.!