ನವದೆಹಲಿ : LPG ಗ್ಯಾಸ್ ಸಿಲಿಂಡರ್ ಬೆಲೆ 01 ಅಕ್ಟೋಬರ್ 2020- ದೇಶದ ತೈಲ ಮಾರುಕಟ್ಟೆ ಕಂಪನಿಗಳು (ಎಚ್ ಪಿಸಿಎಲ್,ಬಿಪಿಸಿಎಲ್, ಐಒಸಿ) ಅಕ್ಟೋಬರ್ ತಿಂಗಳ ಸಬ್ಸಿಡಿ ಮತ್ತು ಸಬ್ಸಿಡಿರಹಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬಿಡುಗಡೆ ಮಾಡಿದೆ.

ಈ ನಡುವೆ ಅಕ್ಟೋಬರ್ ನಲ್ಲಿ, ಆಗಸ್ಟ್-ಸೆಪ್ಟೆಂಬರ್ ನಂತರ ಸತತ ಮೂರನೇ ತಿಂಗಳು, 19 ಕೆಜಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1 ಅಕ್ಟೋಬರ್ 2020 ರಂದು ಹಚ್ಚಳವಾಗಿದೆ.

ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 594 ರೂ. ಇತರ ನಗರಗಳಲ್ಲೂ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಗಳು ಸ್ಥಿರವಾಗಿವೆ. ಆದರೆ, 19 ಕೆಜಿ ಸಿಲಿಂಡರ್ ಗಳ ಬೆಲೆ ಹೆಚ್ಚಳವಾಗಿದೆ.. ಐಒಸಿ ವೆಬ್ ಸೈಟ್ ನ ಬೆಲೆ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 32 ರೂ ಹೆಚ್ಚಳವಾಗಿದೆ