ಬೆಂಗಳೂರು: ಪತ್ರಕರ್ತೆ, ಜನಪರ ಹೋರಾಟಗಾರ್ತಿ ಗೌರಿ ಲಂಕೇಶ್ ರ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ ಜನಪರ ಹೋರಾಟಗಾರರು.

10-30 ರಸುಮಾರಿಗೆ ನಗರದ ರೈಲ್ವೆ ಸ್ಟೇಷನ್ ನಿಂದ ಸೆಂಟ್ರಲ್ ಕಾಲೇಜಿನವರೆಗೂ ಮೆರವಣಿಗೆ ನಡೆಸಲಾಗುತ್ತದೆ.

ರಾಜ್ಯಾಧ್ಯಂತ ಈ ಹೋರಟಕ್ಕೆ ಯುವಕರು, ಜನಪರ ಹೋರಾಟಗಾರರು, ಸಾಹಿತಿಗಳು, ದಲಿತ ಸಂಘಟನೆ, ಕಮ್ಯೂನಿಷ್ಟ್ ಪಕ್ಷದ ಸಂಘಟನೆ, ರೈತ ಸಂಘಟನೆಯ ಮುಖಂಡರು ಸ್ವಯಂ ಪ್ರೇರಿತರಾಗಿ  ಭಾಗವಹಿಸಲಿದ್ದಾರೆ.

ಒಂದೇ ಘೋಷಣೆ ವಾಕ್ಯ ನಾನು ಗೌರಿ. ಬೆಳಿಗ್ಗೆಯಿಂದ ಸಂಜೆ 4 ರವರೆಗೂ ಕಾರ್ಯಕ್ರಮ ನಡೆಯಲಿದೆ.